ಗದಗ : ಕೊರೊನಾದಿಂದ ಕಂಗಾಲಾಗಿದ್ದ ಜನ ಈಗಷ್ಟೆ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ.
ಸೋಂಕು ತಗುಲದಿರಲೆಂದು ಸರ್ಕಾರದ ಕಟ್ಟಪ್ಪಣೆಯಂತೆ ಮನೆಯಲ್ಲಿದ್ದ ಜನ ನಿಧಾನವಾಗಿ ಮರಳಿ ತಮ್ಮ ಕಾಯಕಗಳಿಗೆ ಅಣಿಯಾಗುತ್ತಿದ್ದಾರೆ.
ಬದುಕಿನ ಬಂಡಿ ಓಡಿಸಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಆರಂಭಿಸಿರುವ ಜನಸಾಮಾನ್ಯರು ಸಾರಿಗೆಗಾಗಿ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನೇ ಅವಲಂಭಿಸಿದ್ದಾರೆ.
ಹೀಗೆ ಕೊರೊನಾ ಅಳುಕಿನಲ್ಲಿಯೇ ಬಸ್ ಸಂಚಾರ ಆರಂಭಿಸಿರುವ ಜನರ ಮನ ತಣಿಸಲು ಗದಗ ಬಸ್ ಡಿಪೋದಲ್ಲಿನ ಭದ್ರತಾ ಸಿಬ್ಬಂದಿ ಶಿವಾನಂದ ವಿನೂತನ ಪ್ರಯತ್ನ ವೊಂದನ್ನು ಮಾಡಿದ್ದಾರೆ.
ಹೌದು ಎನ್ ಡಬ್ಲ್ಯುಕೆ ಎಸ್ ಆರ್ ಟಿಸಿ ಕಾರ್ಮಿಕರಿಗೆ ಮನರಂಜನೆ ನೀಡಲು ಕ್ಲಾಸಿಕ್ ಕನ್ನಡ ಗೀತೆಯೊಂದನ್ನು ಹೇಳುವ ಮೂಲಕ ಎಲ್ಲರ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.
ಸಿಬ್ಬಂದಿಯ ಸಾಂಗ್ ಕೇಳಿದ ಮನಸ್ಸುಗಳು ನಸು ನಕ್ಕು ಮುಂದೆ ಸಾಗಿದ್ದಾರೆ.
ಇನ್ನೂ ಶಿವಾನಂದ ಅವರು ಡಾ.ರಾಜ್ ಕುಮಾರ್ ಗೀತೆಯನ್ನು ಹಾಡಿದ್ದು ಮತ್ತೊಂದು ವಿಶೇಷವೇ ಸರಿ.
ಅದ್ಯಾವ ಹಾಡು ಹೇಳಿದ್ದಾರೆ ಅನ್ನೋದನ್ನಾ ಶಿವಾನಂದ ಅವರ ಕಂಠದಲ್ಲಿಯೇ ಕೇಳಿ ಆನಂದಿಸಿ ಇಂತಹ ಪ್ರತಿಭೆಗಳನ್ನಾ ಪ್ರೋತ್ಸಾಹಿಸಿ.
Kshetra Samachara
15/10/2020 10:39 am