ಧಾರವಾಡ: ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರನ್ನು ಪತ್ತೆ ಮಾಡುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಮಖಂಡಿ ತಾಲೂಕಿನ ಹೊಸೂರು ಗ್ರಾಮದ ಸಚಿನ್ ಗಿರಿಸಾಗರ್, ಧಾರವಾಡ ರಾಜೀವಗಾಂಧಿನಗರದ ವಿಠ್ಠಲ ಶಿವಪ್ಪನವರ ಹಾಗೂ ನವಲೂರು ಜನತಾ ಪ್ಲಾಟ್ ನಿವಾಸಿ ಸುನೀಲ ಜಾಂಬೋಟಿ ಎಂಬುವವರೇ ಬಂಧಿತ ಆರೋಪಿಗಳು.
ಬಂಧಿತರಿಂದ 2.80 ಲಕ್ಷ ಮೌಲ್ಯದ ಎಂಟು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಹರ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
Kshetra Samachara
10/10/2022 10:49 am