ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 6 ಜನ ಕಳ್ಳರ ಬಂಧನ

ಹುಬ್ಬಳ್ಳಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಕಳ್ಳರನ್ನು ಬಂಧನ ಮಾಡುವಲ್ಲಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಸುಮಾರು ದಿನಗಳಿಂದ ಗ್ರಾಮೀಣ ವ್ಯಾಪ್ತಿಯಲ್ಲಿ ಹಲವಾರು ಕಳ್ಳತನ ಪ್ರಕರಣಗಳು ಆಗಿದ್ದವು. ಖಚಿತ ಮಾಹಿತಿ ಮೇರೆಗೆ ಹಾಗೂ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್ ಮಾರ್ಗದರ್ಶನದಲ್ಲಿ ಬಂಧನ ಮಾಡಲಾಗಿದೆ.

ರಫೀಕ್ ಧಾರವಾಡ್, ಪರಶುರಾಮ್ ಅಂಬಿಗೇರ್, ಪ್ರಕಾಶ್ ಹರಿಹರ ,ಅಮೀರ್ ಗುಂತಕಲ್, ನಾಸೀರ್ ಚುರುಮುರಿ ಮತ್ತು ಎವನ್ ಕುಮಾರ್,ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 70,000 ಬೆಲೆಗಳು ಒಂದು ದ್ವಿಚಕ್ರ ವಾಹನ ಹಾಗೂ ಎರಡು ಲಕ್ಷ ಬೆಲೆಬಾಳು ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರಸಾದ್ ಪಣೇಕರ್, ಚಾಮುಂಡೇಶ್ವರಿ, ಹಾಗೂ ಎ.ಎಸ್.ಐ ದೇವರಾಜ್ ನೀಲಮ್ಮನವರ, ಸಿಬ್ಬಂದಿಗಳಾದ ಎನ್ಎಮ್ ಹೊನ್ನಪ್ಪನವರ , ಮಹಾಂತೇಶ್ ನಾನಗೌಡ,ಚಂದ್ರು ಜನಗಣವರ್ ,ಗಿರೀಶ್ ತಿಪ್ಪಣ್ಣವರ್ ಸಂತೋಷ್ ಯರಗಟ್ಟಿ ,ರವಿ ಮರಡೂರ್ ಮಂಜುಮದುಗಿರಿ ,ಮಾಲ್ತೇಶ್ ,ಜಗದೀಶ್ ಬರಿಗಾಲ್, ಹನುಮಂತ್ ಮೊರಬದ ವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

06/10/2022 09:05 am

Cinque Terre

112.8 K

Cinque Terre

5

ಸಂಬಂಧಿತ ಸುದ್ದಿ