ಹುಬ್ಬಳ್ಳಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿ, ಮೃತಳ ತಂದೆ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನವನಗರದ ಅಶ್ವಿನಿ ಕಿರಣ ವಾಲಿ (28) ನೇಣಿಗೆ ಶರಣಾದ ಮಹಿಳೆ. ಮೃತಳ ಗಂಡ ಕಿರಣ, ಅತ್ತೆ ಮಹಾದೇವಿ, ಮೈದುನ ಅರುಣ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಅಲ್ಲದೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಮಗಳು ಗಂಡನ ಮನೆಯ ಬೆಡ್ ರೂಮ್‌ನಲ್ಲಿ ತಡರಾತ್ರಿ ಫ್ಯಾನಿಗೆ ಸೀರೆಯಿಂದ ಕೇಣಿಗೆ ಶರಣಾಗಿದ್ದಾಳೆಂದು ಬೆನಕಟ್ಟಿ, ಓಣಿಯ ಮಲ್ಲಿಕಾರ್ಜುನ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Kshetra Samachara
01/10/2022 02:33 pm