ಹುಬ್ಬಳ್ಳಿ: ಹೀಗೆ ಮಾಧ್ಯಮದ ಮುಂದೆ ಕಣ್ಣೀರು ಹಾಕಿ ತಮಗೆ ಆದ ಗಾಯವನ್ನು ತೋರಿಸುತ್ತಾ ಸರ್ ನಿನ್ನೇ ರಾತ್ರಿ 15ಕ್ಕೂ ಹೆಚ್ಚು ಜನರು ಚಾಕು,ಚೂರಿ ಹಾಗೂ ಕಟ್ಟಿಗೆಗಳಿಂದ ಮಹಿಳೆಯರು ಮಕ್ಕಳು ಎನ್ನದೇ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಹೋಗಿದ್ದಾರೆ ಸರ್, ಪೊಲೀಸ್‌ನವರ ಬಳಿ ಹೋದ್ರು ಕೂಡಾ ನಮಗೆ ಸರಿಯಾದ ನ್ಯಾಯ ಸಿಕ್ಕಿಲ್ಲ, ನಮಗೆ ಹೊಡೆದವರು ಆರಾಮಾಗಿ ನಮ್ಮ ಮುಂದೆ ಓಡಾಡುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಿರೋ ಈ ಮಹಿಳೆಯರ ಕಥೆ ಏನು ಅಂತೀರಾ ಈ ಸ್ಟೋರಿಯನ್ನು ಒಮ್ಮೆ ನೋಡಿ...
ಹೀಗೆ ಸ್ಕ್ರ್ಯಾಪ್ ಅಡ್ಡಾದಲ್ಲಿ ತಮಗೆ ಆದ ಅನ್ಯಾಯವನ್ನು ಹೇಳಿಕೊಳ್ಳುತ್ತಿರೋ ಈ ಮಹಿಳೆಯರು ಹುಬ್ಬಳ್ಳಿಯ ನೇಕಾರನಗರದ ವಾಣಿಪ್ಲಾಟ್ ನಿವಾಸಿಗಳು. ಕಳೆದ ಹಲವು ವರ್ಷಗಳಿಂದ ಸ್ಕ್ರ್ಯಾಪ್ ಅಡ್ಡಾ ನಡೆಸಿಕೊಂಡು ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾರೆ,ಆದ್ರೆ ನಿನ್ನೇ ರಾತ್ರಿ ನಡೆದ ಆ ಒಂದು ಘಟನೆಯಿಂದ ಮಹಿಳೆಯರು ಹಾಗೂ ಮಕ್ಕಳು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರತಿನಿತ್ಯವೂ ಕೂಡಾ ಈ ಸ್ಕ್ರ್ಯಾಪ್ ಅಡ್ಡೆಯನ್ನು ಬೆಳ್ಳಿಗ್ಗೆ 9 ಗಂಟೆಗೆ ತೆಗೆದು ಸಾಯಂಕಾಲ 7 ಗಂಟೆಗೆ ಬಂದ ಮಾಡ್ತಾರೆ ,ನಿನ್ನೇ ರಾತ್ರಿ 9.30ಕ್ಕೇ ವಾಣಿಪ್ಲಾಟ್ ನ ಇಬ್ಬರು ಪುಂಡರು ಸ್ಕ್ರ್ಯಾಪ್ ಸಾಮಗ್ರಿ ಹಾಕಲು ಅಡ್ಡೆಗೆ ಬಂದರು.
ಮಂಜುಳಾ ಎಂಬುವರು ಈಗ ತಡವಾಗಿದೆ ಬೆಳ್ಳಿಗ್ಗೆ ಬನ್ನಿ ಅಂತಾ ಹೇಳಿದ್ದಾಳೆ, ಇದರಿಂದ ಕೋಪಗೊಂಡ ಮಂಜುಳಾಗೆ ಅವಾಚ್ಯವಾಗಿ ನಿಂದನೆ ಮಾಡಲು ಪ್ರಾರಂಭ ಮಾಡಿದ್ದಾರೆ, ಆಗ ಅಡ್ಡೆಯಲ್ಲಿದ ಇನ್ನುಳಿದ ಮಹಿಳೆಯರು ಯಾಕೆ ಬೈಯುತ್ತಿದ್ದರಾ ಅಂತಾ ಪ್ರಶ್ನೆ ಮಾಡಿದ್ದಾರೆ.
ಇದರಿಂದ ಮತ್ತಷ್ಟು ಸಿಟ್ಟಿಗಾದ ಇಬ್ಬರು ಪುಂಡರು ತಮ್ಮ ಕುಟುಂಬದವರನ್ನು ಹಾಗೂ ಸ್ನೇಹಿತರನ್ನು ಕರೆದುಕೊಂಡು ಬಂದು ಚಾಕು ಹಾಗೂ ಬಡಿಗೆಗಳಿಂದ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು.
ಇದರ ಪರಿಣಾಮ ಮಹಿಳೆಯರು ಗಾಯಗೊಂಡು ಹಳೇ ಹುಬ್ಬಳ್ಳಿ ಪೊಲೀಸರಿಗೆ ದೂರು ಕೊಡಲು ಹೋದ್ರು ಕೂಡಾ ಪೊಲೀಸರು ದೂರನ್ನು ದಾಖಲು ಮಾಡಿಕೊಳ್ಳೋದು ಬಿಟ್ಟು ನಾಳೆ ಬನ್ನಿ ಅಂತಾ ಹೇಳಿ ಕಳುಹಿಸಿದ್ದಾರೆ.
ನಮಗೆ ಅನ್ಯಾಯವಾಗಿದೆ ಅಂತಾ ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ಮುಂದಾದರು ಕೂಡಾ ದೂರು ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿದ ಹಳೇ ಹುಬ್ಬಳ್ಳಿಯ ಪೊಲೀಸರ ಮೇಲೆ ಹು-ಧಾ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಯಾವ ರೀತಿಯಾದ ಕ್ರಮವನ್ನು ಕೈಗೊಳ್ಳುತ್ತಾರೋ ಅಥವಾ ತಮ್ಮ ಸಿಬ್ಬಂದಿಯ ಕಾರ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ...
-ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
29/09/2022 08:04 am