ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ಕೊಲೆಯ ವಿಚಾರ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು ಇದೀಗ ಈ ಕೊಲೆಯ ಪ್ರಕರಣವನ್ನು ಮುಚ್ಚಿ ಹಾಕಲು 45 ಲಕ್ಷ ರೂಪಾಯಿಗೆ ಡೀಲ್ ಆಗಿದೆ ಅಂತಾ ಕೊಲೆಯಾದ ದೀಪಕ್ ತಮ್ಮ ಸಂಜಯ ಪಟದಾರಿ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಸರ್ಕಾರ ಈ ಕೊಲೆಯ ಪ್ರಕರಣವನ್ನು ಸಿಐಡಿ ಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಇಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ದೀಪಕ್ ಪಟದಾರಿ ಕುಟುಂಬಸ್ಥರನ್ನು ವಿಚಾರಣೆ ಮಾಡಿದ್ದು, ಕೊಲೆಯಾದ ದೀಪಕ್ ಪಟದಾರಿ ತಮ್ಮ ಸಂಜಯ, ಸಿಐಡಿ ಅಧಿಕಾರಿಗಳ ಮುಂದೆ ಕೊಲೆಯಾದ ತದ ನಂತರದಲ್ಲಿ ನಡೆದ ಎಲ್ಲ ಬೆಳವಣಿಗೆಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಮುಖ್ಯವಾಗಿ ಅಣ್ಣನ ಕೊಲೆಯ ಪ್ರಕರಣವನ್ನು ಮುಚ್ಚಿ ಹಾಕಲು 45 ಲಕ್ಷ ರೂಪಾಯಿಗೆ ಎಸಿಪಿ ಆರ್ ಕೆ ಪಾಟೀಲ್ ಅವರೇ ಡೀಲ್ ಮಾಡಿದ್ದು, ಅದರಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೋಕ ಚವ್ಹಾಣ ಹಾಗೂ ಕ್ರೈಂ ಸಿಬ್ಬಂದಿಗಳಾದ ನಾಗರಾಜ,ಪರಶುರಾಮ,ಹಾಗೂ ವಸಂತ ಶಾಮೀಲಾಗಿ ಪ್ರಕರಣದ ದಿಕ್ಕು ತಪ್ಪಿಸಿದ್ದರು ಎಂದು ಗಂಭೀರ ಆರೋಪವನ್ನು ಸಂಜಯ ಪಟದಾರಿ ಮಾಡಿದ್ದಾರೆ.
Kshetra Samachara
24/09/2022 10:16 pm