ಹುಬ್ಬಳ್ಳಿ: ಅದು ಗ್ರಾ.ಪಂ ಸದಸ್ಯನ ಮರ್ಡರ್ ಕೇಸ್. ಆ ಕೊಲೆ ಕೇಸ್ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಕೊಲೆ ಕೇಸ್‌ನಲ್ಲಿ ಮೃತನ ಸಂಬಂಧಿಕರು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಮೃತನ ಸಂಬಂಧಿಕರು ಕಣ್ಣೀರು ಹಾಕಿದ್ದರು. ಇದೀಗ ಆ ಕೊಲೆ ಕೇಸ್ CIDಗೆ ಹಸ್ತಾಂತರ ಮಾಡಿದ್ದಾರೆ. ಹೀಗಾಗಿ ಪೊಲೀಸರಿಗೆ ನಡುಕ ಶುರುವಾಗಿದೆ. ಅಷ್ಟಕ್ಕೂ ಯಾರೂ ಗ್ರಾಪಂ ಸದಸ್ಯ, ಪೊಲೀಸರಿಗೆ ಯಾಕೆ ನಡುಕ ಅಂತೀರಾ ಈ ಸ್ಟೋರಿ ನೋಡಿ.
ದೀಪಕ್ ಪಟದಾರಿ ಕಳೆದ ಜುಲೈ 4ರಂದು ಹುಬ್ಬಳ್ಳಿ ರಾಯನಾಳ ಬಳಿ ಬರ್ಬರ ಕೊಲೆಯಾಗಿದ್ದ. ದೀಪಕ್ ಪಟದಾರಿ ಸಾಮಾನ್ಯ ಮನುಷ್ಯ ಏನಲ್ಲ. ದೀಪಕ್ ಪಟದಾರಿ ಗ್ರಾ.ಪಂ ಸದಸ್ಯ. ತಡರಾತ್ರಿ ದೀಪಕ್ ನನ್ನ ಹಂತಕರು ಕೊಚ್ಚಿ ಕೊಲೆ ಮಾಡಿದ್ದರು. ದೀಪಕ್ ಪಟದಾರಿ ಕೊಲೆ ಕಂಡು ಜನ ಬೆಚ್ಚಿ ಬಿದ್ದಿದ್ರು. ಪ್ರೀತಿಸಿ ಮದುವೆಯಾದ ವಿಷಯಕ್ಕೆ ದೀಪಕ್ ಕೊಲೆಯಾಗಿದೆ ಅನ್ನೋ ಆರೋಪ ಇತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿತ್ತು. ಆದರೆ ದೀಪಕ್ ಪಟದಾರಿ ಕೊಲೆಯಾಗಿ ಮೂರು ತಿಂಗಳಾದ್ರೂ ಪ್ರಮುಖ ಆರೋಪಿಗಳನ್ನ ಬಂಧಿಸಿಲ್ಲ. ಅಲ್ಲದೆ ದೀಪಕ್ ಕೊಲೆ ಕೇಸ್ ನಲ್ಲಿ ಪೊಲೀಸರ ಮೇಲೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ದೀಪಕ್ ಪತ್ನಿ ಪುಷ್ಪಾ ಹಾಗೂ ಸಹೋದರ ಸಂಜಯ್ ಪಟದಾರಿ ನಮ್ಮಣ್ಣನ್ನ ಕೊಲೆಗೆ ನ್ಯಾಯ ಸಿಗಬೇಕು, ಎಂದು ಕಣ್ಣೀರು ಹಾಕಿದ್ರು. ನೇರವಾಗಿ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದರು. ಇದೀಗ ದೀಪಕ್ ಮರ್ಡರ್ ಕೇಸ್ CID ಗೆ ವರ್ಗಾವಣೆಯಾಗಿದೆ. ಹಳೇ ಹುಬ್ಬಳ್ಳಿ ಪೊಲೀಸರು ತನಿಖೆ ನಡೆಸುತ್ತಿರೋವಾಗಲೇ CIDಗೆ ವರ್ಗಾವಣೆಯಾಗಿದ್ದು, ಹಲವರಿಗೆ ನಡುಕ ಶುರುವಾಗಿದೆ.
ಇನ್ನೂ ದೀಪಕ್ ಪಟದಾರಿ ಗ್ರಾ.ಪಂ ಸದಸ್ಯನಾಗಿದ್ದ. ದೀಪಕ್ ಮೇಟಿ ಕುಟುಂಬದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರೋದೆ ಕೊಲೆಗೆ ಕಾರಣ ಎನ್ನಲಾಗಿತ್ತು. ದುಷ್ಕರ್ಮಿಗಳು ಕೊಚ್ಚಿ ದೀಪಕ್ ಕೊಲೆ ಮಾಡಿದ್ರು. ಮೂರು ತಿಂಗಳ ಹಿಂದೆ ಕೊಲೆಯಾದ್ರೂ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಲ್ಲ ಎನ್ನುವುದು ಮೃತ ದೀಪಕ್ ಕುಟುಂಬದ ಆರೋಪವಾಗಿತ್ತು. ಅಲ್ಲದೆ ದೀಪಕ್ ಕೊಲೆಯಲ್ಲಿ ನೇರವಾಗಿ ಪೊಲೀಸರ ಪಾತ್ರ ಇದೆ ಎಂದು ದೀಪಕ್ ಸಹೋದರ ಸಂಜಯ್ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ರು. ನಮಗೆ ನ್ಯಾಯ ಸಿಗಬೇಕು ಹೀಗಾಗಿ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಆಗ್ರಹಿಸಿದ್ರು. ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ರು. ಇದೀಗ ಪ್ರಕರಣ CIDಗೆ ಹಸ್ತಾಂತರ ಆಗಿದ್ದಕ್ಕೆ ಮೃತನ ಸಹೋದರ ಧನ್ಯವಾದ ಹೇಳಿದ್ದಾರೆ. ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಬೇಕು,ನಮಗೆ ನ್ಯಾಯ ಸಿಗೋವರೆಗೂ ನಮ್ಮ ಅಣ್ಣನ ಚೀತಾ ಭಸ್ಮ ವಿಸರ್ಜನೆ ಮಾಡಲ್ಲ ಎಂದು ಶಥಪ ಮಾಡಿದ್ದಾರೆ..
ಒಟ್ಟಾರೆ ಗ್ರಾಪಂ ಸದಸ್ಯ ದೀಪಕ್ ಮರ್ಡರ್ ಕೇಸ್ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯಾಕಂದ್ರೆ ಇಷ್ಟು ದಿನ ಪೊಲೀಸರು ತನಿಖೆ ಮಾಡದೆ ಪ್ರಕರಣ ಮುಚ್ಚಿ ಹಾಕೋಕೆ ಪ್ರಯತ್ನಿಸಿದ್ರು.ಇದೀಗ ಪ್ರಕರಣ CID ಗೆ ವರ್ಗಾವಣೆಯಾಗುತ್ತಲೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಢವ ಢವ ಶುರುವಾಗಿದೆ,CID ಅಧಿಕಾರಿಗಳು ತನಿಖೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಬೇಕಿದೆ.
Kshetra Samachara
24/09/2022 04:19 pm