ಹುಬ್ಬಳ್ಳಿ: ಪೊಲೀಸ್ ಕ್ವಾಟರ್ಸ್‌ದಲ್ಲಿನ ಕಳ್ಳತನ ಪ್ರಕರಣ ಸೇರಿ ಒಟ್ಟು 3 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ರಸ್ತೆಯ ಕುರಿಹಟ್ಟಿಯ ಗಣೇಶ ಕಾಲೋನಿ ನಿವಾಸಿ ಶ್ರೀಕಾಂತ್ ರೊಡ್ಡಾ ಎಂದು ತಿಳಿದುಬಂದಿದೆ. ಈತ ಹುಬ್ಬಳ್ಳಿ ಮಿಷನ್ ಕಂಪೌಂಡದಲ್ಲಿ ಸೆ.11ರಂದು ಒಟ್ಟು 3,20,000 ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದ, ಈ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಆಯುಕ್ತ ಲಾಬೂರಾಮ್, ಡಿಸಿಪಿ ಸಾಹಿಲ್ ಬಾಗ್ಲಾ ಡಾ. ಗೋಪಾಲ ಎಮ್ ಬ್ಯಾಕೋಡ, ಎಸಿಪಿ ವಿನೋದ ಮುಕ್ತದಾರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವಿಚಂದ್ರ ಡಿ.ಬಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ( ಅವಿ ಕವಿತಾ ಎಸ್ ಎಮ್ ಮತ್ತವರ ಸಿಬ್ಬಂದಿಗಳ ತಂಡ ಖಚಿತ ಮಾಹಿತಿ ಮೆರೆಗೆ ಸೆ. 21 ರಂದು ಬಂಧಿಸಿದ್ದಾರೆ.
ಇನ್ನು ಆರೋಪಿಯಿಂದ ಒಟ್ಟು ಮೂರು ಪ್ರಕರಣಗಳಿಗೆ ಸಂಭಂದಿಸಿದಂತೆ 6,95,000 ರೂ ಕಿಮ್ಮತ್ತಿನ 165 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,000 ರೂ ಮೌಲ್ಯದ 20 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು 30,000 ನಗದು ಹಣವನ್ನು ಜಪ್ತ ಮಾಡಿ, ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.
ಆರೋಪಿ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವಿಚಂದ್ರ ಡಿಬಿ, ಪಿಎಸ್‌ಐ ( ಅವಿ ) ಕವಿತಾ ಎಸ್ ಎಮ್, ಪಿಎಸ್‌ಐ ಸ್ವಾತಿ ಮುರಾರಿ, ಎಎಸ್‌ಐ ಎಮ್ ಆರ್ ಮಲ್ಲಿಗವಾಡ ಮತ್ತು ಸಿಬ್ಬಂದಿಯಾದ ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಶ್ರೀನಿವಾಸ ಯರಗುಪ್ಪಿ, ಕೃಷ್ಣಾ ಮೋಟೆಬೆನ್ನೂರು, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ರೇಣು ಸಿಕ್ಕಲಗೇರ, ಮಾಬುಸಾಬ ಮುಲ್ಲಾ ಹಾಗೂ ಆರೂಢ ಕರೆಣ್ಣವರ ಇವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
Kshetra Samachara
23/09/2022 09:11 am