ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೃಷಿ ಹೊಂಡ ಬಳಿ ನಾಪತ್ತೆಯಾಗಿದ್ದ ಕುರಿಗಾಹಿ ಆತ್ಮಹತ್ಯೆ, ಸಾಲಭಾದೆಯೇ ಕಾರಣವಾಯ್ತಾ?

ನವಲಗುಂದ : ಮಂಗಳವಾರ ಕುರಿ ಮೇಯಿಸಲು ಹೋದ ವ್ಯಕ್ತಿ ಮತ್ತೆ ಮನೆಗೆ ಮರಳದ ಹಿನ್ನೆಲೆ ಕುಟುಂಬಸ್ಥರು ಆತನನ್ನು ಹುಡಿಕಾಡಿದ್ದಾರೆ. ಹಳ್ಳಿಕೇರಿ ಮಾರ್ಗದಲ್ಲಿನ ಹೂಗಾರ ಅವರ ಕ್ವಾರಿಯ ಬಳಿ ಆತನ ಬಟ್ಟೆ ಹಾಗೂ ಆಡು ಕಂಡಿದ್ದನ್ನು ನೋಡಿ, ನೀರಿನಲ್ಲಿ ಮುಳುಗಿದ್ದಾನೆ ಎಂಬ ಶಂಕೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆ ಇಂದು ಬೆಳಿಗ್ಗೆಯಿಂದಲೇ ಹಳ್ಳಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನವಲಗುಂದ ಪಟ್ಟಣದ ಬಸವೇಶ್ವರ ನಗರದ ಬಳಿಯ ರಸ್ತೆಯ ಹತ್ತಿರದ ಕೃಷಿ ಹೊಂಡದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಹುಡುಕಾಟ ನಡೆಸಲಾಗುತ್ತಿತ್ತು. ಮೃತ ದೇಹ ಈಗ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು 52 ವರ್ಷ ವಯಸ್ಸಿನ ಬಸವೇಶ್ವರ ನಗರದ ನಿವಾಸಿಯಾದ ಮಾಬುಸಾಬ್ ರಾಯಸಾಬ್ ಬಸರಕೋಡ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಕೃಷಿಗಾಗಿ ಬ್ಯಾಂಕ್ ಹಾಗೂ ಕೈಗಡ ಸಾಲ ತೆಗೆದುಕೊಂಡಿದ್ದ ಎನ್ನಲಾಗಿದ್ದು, ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಿಖರ ಕಾರಣ ತನಿಖೆ ನಂತರವೇ ತಿಳಿದು ಬರಬೇಕಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Manjunath H D
Kshetra Samachara

Kshetra Samachara

21/09/2022 10:02 pm

Cinque Terre

33.31 K

Cinque Terre

0

ಸಂಬಂಧಿತ ಸುದ್ದಿ