ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ ಕೇಶ್ವಾಪೂರ ಪೊಲೀಸರು

ಹುಬ್ಬಳ್ಳಿ: ಸೊಲ್ಲಾಪುರದಿಂದ ಗಾಂಜಾ ತೆಗೆದುಕೊಂಡು ಬಂದು, ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಕೇಶ್ವಾಪೂರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸೊಲ್ಲಾಪುರದಿಂದ ಗಾಂಜಾ ತೆಗೆದುಕೊಂಡು ಬಂದು ಮೂವರು ನಗರದ ಗೋಪನಕೊಪ್ಪ, ಸ್ವಾಗತ ಕಾಲೋನಿ ಬಳಿ ಮಾರಾಟ ಮಾಡುತ್ತಿದ್ದರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೇಶ್ವಾಪೂರ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿ, 516 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಠಾಣೆಯ, ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಪಿಎಸ್‌ಐ ನೇತೃತ್ವದ ತಂಡ, ಬೆಂಗೇರಿಯ ಇಬ್ಬರು ಹಾಗೂ ಹೂಗಾರ ಪ್ಲಾಟ್‌ ನ ಓರ್ವನನ್ನು ಗಾಂಜಾ ಸಮೇತ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರಲ್ಲಿ ಬೆಂಗೇರಿಯ ಓರ್ವನು ಕಳೆದ ತಿಂಗಳು ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆದರೂ ಮತ್ತೆ ತನ್ನ ಚಾಳಿ ಬಿಟ್ಟಿರಲಿಲ್ಲ ಎಂದು ತಿಳಿದುಬಂದಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

21/09/2022 12:23 pm

Cinque Terre

31.77 K

Cinque Terre

2

ಸಂಬಂಧಿತ ಸುದ್ದಿ