ಧಾರವಾಡ: ಮೊನ್ನೆಯಷ್ಟೇ ತನ್ನ ಹೆಂಡತಿಯನ್ನೇ ಹತ್ಯೆಗೈದು ಪರಾರಿಯಾಗಿದ್ದ ಗದಿಗೆಪ್ಪ ಪಠಾತ್‌ನನ್ನು ಧಾರವಾಡ ಶಹರ ಠಾಣೆ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.ಕುಡಿದ ಮತ್ತಿನಲ್ಲಿ ಗದಿಗೆಪ್ಪ ತನ್ನ ಹೆಂಡತಿ ಮಂಜವ್ವಳ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಹೊಲದಲ್ಲಿ ಮೂಲಂಗಿ ತೊಳೆಯುತ್ತ ಕುಳಿತಿದ್ದ ಮಂಜವ್ವಳನ್ನು ಗದಿಗೆಪ್ಪ ಹತ್ಯೆ ಮಾಡಿ ಪರಾರಿಯಾಗಿದ್ದ.
ಕೊಲೆ ಮಾಡಿದ ನಂತರ ಆರೋಪಿ ಗದಿಗೆಪ್ಪ ಪರಾರಿಯಾಗಿದ್ದ. ಈ ಆರೋಪಿ ಪತ್ತೆಗಾಗಿ ಶಹರ ಠಾಣೆ ಪೊಲೀಸರು ಜಾಲ ಬೀಸಿದ್ದರು. ಇಂದು ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Kshetra Samachara
17/09/2022 12:20 pm