ಹುಬ್ಬಳ್ಳಿ: ಆನ್‌ಲೈನ್ ಆ್ಯಪ್‌ವೊಂದರಲ್ಲಿ ತರಕಾರಿ ಖರೀದಿಸುತ್ತಿದ್ದ ನಗರದ ಮಹಿಳೆಯೊಬ್ಬರಿಗೆ ಅಪರಿಚಿತರು ಕರೆ ಮಾಡಿ, 'ಆನ್‌ಲೈನ್ ಆ್ಯಪ್‌ನಲ್ಲಿ ನಿಮಗೆ 12,97,000 ರೂ. ಲಾಟರಿ ಹತ್ತಿದೆ' ಎಂದು ನಂಬಿಸಿ, ತೆರಿಗೆ ಮತ್ತಿತರ ನೆಪದಲ್ಲಿ 8,98,091 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹನಮಂತ ನಗರದ ಲಕ್ಷ್ಮೀಬಾಯಿ ಎಂಬುವರು ಮೀಸೋ ಆನ್‌ಲೈನ್ ಆ್ಯಪ್ ಮೂಲಕ ತರಕಾರಿ ಖರೀದಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕದ್ದ ವಂಚಕರು, ಇವರಿಗೆ ಕರೆ ಮಾಡಿದ್ದರು. ಮೀಸೋ ಆ್ಯಪ್‌ನಲ್ಲಿ ನಿಮಗೆ 12,97,000 ರೂ. ಲಾಟರಿ ಹತ್ತಿದೆ ಎಂದು ನಂಬಿಸಿದ್ದರು. ಈ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಬೇಕಾದರೆ ತೆರಿಗೆ, ಮತ್ತಿತರ ಶುಲ್ಕ ತುಂಬಬೇಕು ಎಂದು ಕ್ಯೂಆರ್ ಕೋಡ್, ಬ್ಯಾಂಕ್ ಖಾತೆಗಳ ಮಾಹಿತಿ ಕಳುಹಿಸಿದ್ದರು. ನಂತರ ಹಂತ ಹಂತವಾಗಿ 8,98,091 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
Kshetra Samachara
12/09/2022 12:37 pm