ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಲ್ಲೆಗೆ ಬಂದವರೇ ಹಲ್ಲೆಗೊಳಗಾದರು; ತಲ್ವಾರ್ ಕೇಸ್‌ಗೆ ಟ್ವಿಸ್ಟ್

ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಎಸ್.ಎಂ ಕೃಷ್ಣಾ ನಗರದಲ್ಲಿ ಯುವಕರ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಿದ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗಾದ ಸಹೋದರರೆ ಯುವಕನೊಬ್ಬನ ಮೇಲೆ ಚಾಕು ಹಾಗೂ ಸ್ಟೀಕ್‌ನಿಂದ ಹಲ್ಲೆ ಮಾಡಲು ಬಂದಾಗ ಸ್ಥಳೀಯರೆಲ್ಲರು ಸೇರಿ ಯುವಕರಿಗೆ ಹೊಡೆದ ಘಟನೆ ನಡೆದಿದೆ.

ಹೌದು. ಎಸ್.ಎಂ ಕೃಷ್ಣಾ ನಗರದಲ್ಲಿನ ನಿರ್ಮಾಣ ಹಂತದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಾಸುಮಲಿ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಸಾರ್ವಜನಿಕರು ಬೈದಿದ್ದರು. ಆಗ ಸಾರ್ವಜನಿಕರೊಡನೆ ಮಾಸುಮಲಿ ವಾಗ್ವಾದ ಮಾಡಿದಾಗ ಓಣಿಯ ಹಿರಿಯರು ಮಾಸುಮಲಿಗೆ ಒಂದೆರೆಡೇಟು ಹೊಡೆದು ಬುದ್ಧಿ ಹೇಳಿ ಕಳಿಸಿದ್ದರು.

ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಮಾಸುಮಲಿ ತನ್ನ ಸೋದರನಾದ ಸೈಯದ್ ಜೊತೆ ಚಾಕು ಹಾಗೂ ಸ್ಟೀಕ್ ತೆಗೆದುಕೊಂಡು ಬಂದು ಬುದ್ಧಿ ಹೇಳಿದ್ದ ಮಲ್ಲಿಕ್ ರಿಹಾನ ಎಂಬಾತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯರೆಲ್ಲರು ಸೇರಿ ಬುದ್ಧಿ ಹೇಳಲು ಬಂದಾಗ ಸ್ಥಳೀಯರಿಗೆ ಚಾಕು ತೋರಿಸಿ ಹೆದರಿಸಲು ಮುಂದಾಗಿದ್ದ. ಈ ವೇಳೆ ಸ್ಥಳೀಯರೆಲ್ಲರು ಸೇರಿ ಸಹೋದರರಿಗೆ ಹೊಡೆದ ಪರಿಣಾಮ ಸಹೋದರರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಸದ್ಯ ಮಾಸುಮಲಿ ಹಾಗೂ ಸೈಯದ್ ಮೇಲೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಸುಮಲಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

-ವಿನಾಯಕ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
Kshetra Samachara

Kshetra Samachara

10/09/2022 09:07 pm

Cinque Terre

51.81 K

Cinque Terre

5

ಸಂಬಂಧಿತ ಸುದ್ದಿ