ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೆಕ್ಯುರಿಟಿಗೆ ಧಮ್ಕಿ ಹಾಕಿ ಗಂಧದ ಮರ ಎಗರಿಸಿದ ಕಳ್ಳರು

ಧಾರವಾಡ: ಸೆಕ್ಯುರಿಟಿ ಗಾರ್ಡ್‌ಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಖತರ್ನಾಕ್ ಗ್ಯಾಂಗ್ ಒಂದು ಗಂಧದ ಮರ ಕಟಾವು ಮಾಡಿಕೊಂಡು ಹೋಗಿರುವ ಘಟನೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಕಾಲೇಜು ಆವರಣಕ್ಕೆ ಕಾಲಿಟ್ಟ ಈ ಕಳ್ಳರ ಗುಂಪು, ಸೆಕ್ಯುರಿಟಿ ಗಾರ್ಡ್‌ಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ, ಕಾಲೇಜು ಆವರಣದಲ್ಲಿದ್ದ ಅಂದಾಜು 70ರಿಂದ 80 ಸಾವಿರ ರೂಪಾಯಿ ಬೆಲೆಬಾಳುವ ಗಂಧದ ಮರವನ್ನು ಕಟಾವು ಮಾಡಿಕೊಂಡು ಹೋಗಿದ್ದಾರೆ.

ಅಷ್ಟೊತ್ತಿನವರೆಗೂ ಕಳ್ಳರ ಹಿಡಿತದಲ್ಲೇ ಇದ್ದ ಸೆಕ್ಯುರಿಟಿ ಗಾರ್ಡ್‌, ಕಳ್ಳರು ಪರಾರಿಯಾದ ನಂತರ ಇತರ ಸಿಬ್ಬಂದಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಆನಂತರ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.

Edited By : Shivu K
Kshetra Samachara

Kshetra Samachara

10/09/2022 03:15 pm

Cinque Terre

34.93 K

Cinque Terre

4

ಸಂಬಂಧಿತ ಸುದ್ದಿ