ಹುಬ್ಬಳ್ಳಿ: ಹೈಫೈ ಬೈಕ್ ಗಳನ್ನು ಕಳ್ಳತನ ಮಾಡಿ ಅದೇ ಬೈಕ್‌ನಲ್ಲಿ ಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ನಟೋರಿಯಸ್ ಕಳ್ಳರನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡಗಳಲ್ಲಿ ಬಾಗಿಲು ಹಾಕಿದ್ದ ಮನೆ ಹಾಗೂ ಅಂಗಡಿ, ಪಾನ್‌ಶಾಪ್, ಮೆಡಿಕಲ್, ಗೋದಾಮುಗಳನ್ನು ಟಾರ್ಗೆಟ್ ಮಾಡಿ, ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದರು.ನಗರದಲ್ಲಿ ಮೊಬೈಲ್ ಅಂಗಡಿಗಳ ಶಟರ್ಸ್ ಮುರಿದು ಸರಣಿ ಕಳ್ಳತನ ಮಾಡಿದ್ದ ಆರೋಪಿಗಳು, ಅಶೋಕನಗರ ಠಾಣೆ ವ್ಯಾಪ್ತಿಯ ಸಂತೋಷ ನಗರ ಮತ್ತು ಜೆ.ಕೆ. ಸ್ಕೂಲ್ ರಸ್ತೆಯಲ್ಲಿ ಅಂಗಡಿಗಳ ಕಳ್ಳತನ ಮಾಡಿದ್ದರು.
ಈ ಕಳ್ಳರ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದ ಹಾಗೆ ಶಹರ ಠಾಣೆಯ ಇನ್ಸ್ಪೆಕ್ಟರ್ ಆನಂದ ಒನಕುದುರಿ ನೇತೃತ್ವದ ತಂಡ ಆರೋಪಿಗಳಾದ ಸಾಧಿಕ್, ಸೋಫಿಲ್,ಅಹ್ಮದ್,ಬಾಬು ಹಾಗೂ ಚಂದು ಎಂಬುವರನ್ನು ಕದ್ದ ಬೈಕ್ ಗಳ ಸಮೇತ ವಶಕ್ಕೆ ಪಡೆದಿದ್ದು,ಅವಳಿ ನಗರದಲ್ಲಿ ನಡೆದ ಒಟ್ಟು 9 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಅಂಗಡಿ,ಮನೆ,ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಮಾಡುತ್ತಾ ಪೊಲೀಸರ ನಿದ್ದೆ,ಸಾರ್ವಜನಿಕರ ನೆಮ್ಮದಿ ಕೆಡಸಿದ್ದ ಖತರ್ನಾಕ್ ಕಳ್ಳರನ್ನು ಶಹರ ಠಾಣೆಯ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
08/09/2022 10:37 pm