ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಗಾಂಜಾ ಮತ್ತಿನಲ್ಲಿಯೇ ಅಪರಾಧ ಕೃತ್ಯಗಳು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ರಾಜ್ಯದಿಂದ ಗಾಂಜಾ ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಗಾಂಜಾ ಮಾರಾಟ ಜಾಲವನ್ನು ಬೇಟೆಯಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆರೆ ರಾಜ್ಯ ಆಂಧ್ರಪ್ರದೇಶದಿಂದ ಹುಬ್ಬಳ್ಳಿಗೆ ಇನ್ನೋವಾ ಕಾರಿನಲ್ಲಿ ಬಾರಿ ಪ್ರಮಾಣದ ಗಾಂಜಾ ಬರುತ್ತಿದೆ ಎಂಬ ಖಚಿತ ಮಾಹಿತಿ ಹುಬ್ಬಳ್ಳಿಯ CEN ಪೊಲೀಸರಿಗೆ ಲಭ್ಯವಾಗಿತ್ತು. ಕೂಡಲೇ ಅಲರ್ಟ್ ಆದ ಇನ್ಸ್‌ಪೆಕ್ಟರ್ ಎಂ ಎಸ್ ಹೂಗಾರ ಅಂಡ್ ಟೀಂ ಫೀಲ್ಡ್‌ಗೆ ಇಳಿದಿತ್ತು. ಗಾಂಜಾ ತುಂಬಿಕೊಂಡು ಬರುತ್ತಿದ್ದ ಇನ್ನೋವಾ ಕಾರು ನಗರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಆಕ್ಸ್ಪರ್ಡ್ ಕಾಲೇಜು ಬಳಿ ಕಾರನ್ನು ವಶಕ್ಕೆ ಪಡೆದಾಗ ಇಬ್ಬರು ಅಂತರರಾಜ್ಯ ಆರೋಪಿಗಳು ಸೇರಿದಂತೆ ಬರೋಬ್ಬರಿ 61 ಕೆಜಿ 636 ಗ್ರಾಂ ಗಾಂಜಾ ಪತ್ತೆಯಾಗಿದೆ.
ಆರೋಪಿಗಳಾದ ರವಿಕುಮಾರ ಹಾಗೂ ಚಲಪತರಾವ ಎಂಬುವರ ಮೇಲೆ ಹುಬ್ಬಳ್ಳಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಇಎನ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಎಸ್.ಹೂಗಾರ, ಸಿಬ್ಬಂದಿಯಾದ ಕುರಟ್ಟಿ, ಕಂಬಾಳಿಮಠ, ಗಿರೀಶ್ ಬಡಿಗೇರ, ಸುಣಗಾರ, ಮೋಹನ, ಕೋಳಿ ಅವರ ಕಾರ್ಯಕ್ಕೆ ಕಮಿಷನರ್ ಲಾಬುರಾಮ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಯುವ ಸಮೂಹವನ್ನು ತಮ್ಮ ಹಣದಾಸೆಗಾಗಿ ಮಾದಕ ದುಶ್ಚಟಗಳಿಂದ ಹಾಳು ಮಾಡುತ್ತಿದ್ದ ಮನೆ ಮುರುಕರನ್ನು ಹೆಡೆ ಮುರಿಗಟ್ಟಿದ್ದ ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್.
-ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
08/09/2022 09:04 am