ಧಾರವಾಡ: ವಿದ್ಯಾಕಾಶಿ ಎಂದು ಹೆಸರು ಪಡೆದಿರುವ ಧಾರವಾಡದಲ್ಲಿ ವಿದ್ಯಾರ್ಥಿಗಳೂ ಸಹ ಗ್ಯಾಂಗ್ ವಾರ್ ಆರಂಭಿಸಿದಂತೆ ಕಾಣುತ್ತಿದೆ! ಆಗಾಗ ವಿದ್ಯಾರ್ಥಿಗಳ ಮಧ್ಯೆ ಫೈಟ್ ನಡೆಯುತ್ತಲೇ ಇದೆ. ಈ ಘಟನೆಗೆ ಶನಿವಾರ ಧಾರವಾಡ ಮತ್ತೆ ಸಾಕ್ಷಿಯಾಗಿದೆ.
ಧಾರವಾಡದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ನಡುರಸ್ತೆಯಲ್ಲೇ ಮಾರಾಮಾರಿ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪೊಂದು ಮತ್ತೋರ್ವ ವಿದ್ಯಾರ್ಥಿಯನ್ನು ಧಾರವಾಡದ ಸಪ್ತಾಪುರ ರಸ್ತೆಯಲ್ಲಿ ಮನಬಂದಂತೆ ಥಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಈ ದೃಶ್ಯ ನೋಡಿದರೆ ವಿದ್ಯಾಕಾಶಿ ಎಂದು ಹೆಸರು ಪಡೆದಿರುವ ಧಾರವಾಡದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲೇ ಗ್ಯಾಂಗ್‌ವಾರ್ ಶುರುವಿಟ್ಟು ಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.
Kshetra Samachara
27/08/2022 06:28 pm