ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅನ್ನಸಂತರ್ಪಣೆಯಲ್ಲಿ ವಾಮಾಚಾರದ ಆರೋಪ: ಮಾಡಿದ ಅಡುಗೆ ಮಣ್ಣು ಪಾಲು

ನವಲಗುಂದ: ಶ್ರಾವಣ ಮಾಸದ ಪ್ರಯುಕ್ತ ಶನಿವಾರ ನವಲಗುಂದ ಪಟ್ಟಣದ ಬಸವೇಶ್ವರ ನಗರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಿಮಿತ್ತ ಅಭಿಷೇಕ ಮತ್ತು ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈಗ ಅನ್ನಸಂತರ್ಪಣೆಯಲ್ಲಿ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಎಸ್...ಶುಕ್ರವಾರ ರಾತ್ರಿ ಮೈಲಾರಲಿಂಗೆಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆಯಲಿದ್ದ ಅನ್ನಸಂತರ್ಪಣೆಗಾಗಿ ವ್ಯಕ್ತಿಯೊಬ್ಬ ಕುಂಬಳಕಾಯಿಯನ್ನು ನೀಡಿದ್ದ ಎನ್ನಲಾಗಿದೆ. ಅಡುಗೆಗಾಗಿ ಕುಂಬಳಕಾಯಿಯನ್ನು ಕತ್ತರಿಸುವ ವೇಳೆ ಅದರಲ್ಲಿ ಮೊಟ್ಟೆ ಸೇರಿದಂತೆ ವಾಮಾಚಾರಕ್ಕೆ ಸಂಬಂಧ ಪಟ್ಟ ವಸ್ತುಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಡುಗೆಯನ್ನು ನೀರಿಗೆ ಎಸೆಯುವ ನಿರ್ಧಾರ ಮಾಡಲಾಗಿತ್ತು ಎಂದು ಭಕ್ತರು ತಿಳಿಸಿದ್ದರು.

ವಿಷಯ ತಿಳಿಯುತ್ತಲೇ ನವಲಗುಂದ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ, ಭಕ್ತಾದಿಗಳಿಗೆ ಸಮಾಜಾಯಿಸಿ, ಆಹಾರವನ್ನು ಪುರಸಭೆ ಅಧಿಕಾರಿಗಳು ವಶಪಡಿಸಿಕೊಂಡರು.

ಘಟನೆಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ, ನೂರಾರು ಭಕ್ತರಿಗಾಗಿ ಸಿದ್ದಪಡಿಸಲಾಗಿದ್ದ ಆಹಾರ ಈಗ ಮಣ್ಣು ಪಾಲಾಗಿದೆ.

Edited By : Shivu K
Kshetra Samachara

Kshetra Samachara

27/08/2022 04:54 pm

Cinque Terre

47.42 K

Cinque Terre

2

ಸಂಬಂಧಿತ ಸುದ್ದಿ