ಹುಬ್ಬಳ್ಳಿ: ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯನ್ನು ಲಾಡ್ಜಿಗೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಕುರಿತು ಕಾರವಾರದ ಶ್ರೀನಿಧಿ ಅಲಿಯಾಸ್ ಓಂಕಾರ ಕೊಟ್ಟೇಕರ ಎಂಬಾತನ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
17 ವರ್ಷದ ಅಪ್ರಾಪ್ತೆಯ ಜೊತೆ ಶ್ರೀನಿಧಿ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಪುಸಲಾಯಿಸಿ ಆಕೆ ಜತೆಗೆ ಅಲಿಂಗನದ ಫೋಟೋ ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ 2021ರ ನವೆಂಬರ್‌ನಿಂದ 2022ರ ಫೆಬ್ರವರಿ ನಡುವೆ ಅಕ್ಷಯ ಪಾರ್ಕ್ ಬಳಿಯ ಲಾಡ್ಜವೊಂದಕ್ಕೆ ಐದಾರು ಸಲ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಈ ಬಗ್ಗೆ ಯಾರಿಗಾದರೂ ಹೇಳಿದರೆ ಹಗ್ ಮಾಡಿದ ಫೋಟೋ ಎಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೆ, ಆಕೆಯ ಪಾಲಕರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವತಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನೂ ಗೋಕುಲ ರೋಡ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ನೇತೃತ್ವದ ತಂಡ ಕಾರವಾರದಲ್ಲಿ ಆರೋಪಿ ಶ್ರೀನಿಧಿ ಕೊಲ್ವೇಕರ (21)ಎಂಬಾತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Kshetra Samachara
24/08/2022 11:53 am