ಧಾರವಾಡ: ಟಾಟಾ ಏಸ್ ಚಾಲಕನಿಗೆ ಚಾಕು ತೋರಿಸಿ, ಬೆದರಿಕೆ ಹಾಕಿ ನಗದು ಹಾಗೂ ಮೊಬೈಲ್ ದೋಚಿದ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ಟಾಯರ್ ಸಾಗಿಸುತ್ತಿದ್ದ ಟಾಟಾ ಏಸ್ ಚಾಲಕನಿಗೆ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಕೆ ಹಾಕಿ ಚಾಲಕನ ಬಳಿ ಇದ್ದ 10 ಸಾವಿರ ನಗದು ಮತ್ತು ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೂವರು ದರೋಡೆಕೋರರು ಈ ಕೃತ್ಯ ಎಸಗಿದ್ದು, ಇದೇ ತಂಡವು ಕಿತ್ತೂರು ಬಳಿ ಟಾಯರ್ ಸಾಗಿಸುತ್ತಿದ್ದ ಇನ್ನೊಂದು ಟಾಟಾ ಏಸ್ ಚಾಲಕನಿಗೂ ಬೆದರಿಸಿ ದರೋಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಾಹನ ಚಾಲಕರು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
Kshetra Samachara
18/08/2022 10:48 pm