ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮುಂದೆ ನಿಲ್ಲಿಸಿದ್ದ RX100 ಬೈಕ್ ಕಳ್ಳತನ; ಖದೀಮರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಹುಬ್ಬಳ್ಳಿ: ಮನೆ ಮುಂದೆ ನಿಲ್ಲಿಸಿದ್ದ RX 100 ಬೈಕ್‌ನ್ನು ಕಳ್ಳತನ ಮಾಡಿದ ಘಟನೆ ನಗರದ ರಾಜ ನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಕಳ್ಳತರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭರತ್ ನಾಯ್ಡು ಎಂಬುವರ RX 100 ಬೈಕ್ ಕಳ್ಳತನವಾಗಿದೆ. ಭರತ್ ಅವರು ನಿತ್ಯವೂ ಮನೆ ಮುಂದೆ ತಮ್ಮ ಬೈಕ್‌ ಅನ್ನು ಮನೆಯ ಮುಂದೆ ನಿಲ್ಲಿಸುತ್ತಿದ್ದರು. ಇದನ್ನೇ ಟಾರ್ಗೆಟ್ ಮಾಡಿದ ಕಳ್ಳರು ರಾತ್ರಿ 3 ಗಂಟೆಗೆ ಬೈಕ್ ಮೇಲೆ ಬಂದ ಕಳ್ಳರು, ಬೈಕ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಕಳ್ಳರಿಗೆ ಬಲೆ ಬಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/08/2022 10:37 am

Cinque Terre

53.4 K

Cinque Terre

0

ಸಂಬಂಧಿತ ಸುದ್ದಿ