ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 18 ವರ್ಷದಿಂದ ಪಿಕ್ ಪ್ಯಾಕೆಟ್ ಮಾಡ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಹುಬ್ಬಳ್ಳಿ: ಅವಳಿ ನಗರದಲ್ಲಿ ಸಂಚರಿಸುವ ಬೇಂದ್ರೆ ಬಸ್ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಮೆಹಬೂಬ್ ನಗರದ ಅಬ್ದುಲ್ ಮೊಹ್ಮದ ಶೇಖ್ ಎಂಬಾತ, ಹೊಸ ಬಸ್ ನಿಲ್ದಾಣ, ವಿದ್ಯಾಗಿರಿ, ಎಪಿಎಂಸಿ, ವಿದ್ಯಾನಗರ ಹಾಗೂ ಎಸ್‌ಡಿ ಎಂ ಬಳಿಯಲ್ಲಿ ಹತ್ತುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಚಾಣಾಕ್ಷತನದಿಂದ ಪಿಕ್ ಪ್ಯಾಕೆಟ್ ಮಾಡಿ ಅಲ್ಲಿಂದ ಪರಾರಿಯಾಗುತ್ತಿದ್ದ.

ಕಳೆದ 18 ವರ್ಷಗಳಿಂದ ಇದನ್ನೇ ವೃತ್ತಿ ಮಾಡಿಕೊಂಡಿದ್ದ ಅಬ್ದುಲ್ ಪಿಕ್ ಪ್ಯಾಕೆಟ್ ಮಾಡಿದ ಹಣದಿಂದ ಕೆಲವು ದಿನಗಳ ಕಾಲ ಮೋಜು ಮಸ್ತಿ ಮಾಡಿ ದುಡ್ಡು ಖಾಲಿಯಾದಾಗ ಮತ್ತೇ, ಪಿಕ್ ಪ್ಯಾಕೆಟ್ ಮಾಡುವ ಕಾಯಕ ಮುಂದುವರೆಸುತ್ತಿದ್ದ. ಆರೋಪಿಯ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದೇ ತಡ ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಸಂತೋಷ ಪವಾರ್ ನೇತೃತ್ವದ ತಂಡ ಕಿಮ್ಸ್ ಬಸ್ ನಿಲ್ದಾಣದ ಬಳಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

13/08/2022 01:43 pm

Cinque Terre

27.45 K

Cinque Terre

6

ಸಂಬಂಧಿತ ಸುದ್ದಿ