ಹುಬ್ಬಳ್ಳಿ: ನಗರದ ಶಹರ ಪೊಲೀಸ್ ಠಾಣೆಯ ಬಳಿಯೇ ಸರಣಿ ಕಳ್ಳತನ ನಡೆದಿದೆ. ಶಟರ್ಸ್ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.ಮರಾಠಾ ಗಲ್ಲಿ, ಮ್ಯಾದಾರ ಓಣಿ, ಕಲಾದಗಿ ಓಣಿ, ಸ್ಟೇಷನ್ ರೋಡ್ ನಲ್ಲಿ ಎಂಟು ಅಂಗಡಿಗಳಲ್ಲಿ ಕಳ್ಳತನ ನಡೆದಿವೆ. ಶಹರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ರೇಣುಕಾ ಸ್ವೀಟ್ ಮಾರ್ಟ್ ನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ನಗದು ಮತ್ತು ಮೊಬೈಲ್ ಕದ್ದಿರುವ ಕಳ್ಳರು,ನಂತರ ಮಿಶ್ರಾ ಪೇಡಾ ಅಂಗಡಿಯ ಶೆಟರ್ಸ್ ಮುರಿದು 30 ಸಾವಿರ ರೂಪಾಯಿ ಕದ್ದಿದ್ದಾರೆ. ಎರಡು ಬಟ್ಟೆ ಅಂಗಡಿಗಳಲ್ಲಿ 40 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಮೂವರು ಕಳ್ಳರು ಕೃತ್ಯ ನಡೆಸಿದ್ದು, ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
Kshetra Samachara
10/08/2022 10:06 pm