ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಅಪ್ಡೇಟ್ ಮಾಡುತ್ತೇನೆಂದು ನಂಬಿಸಿ, ಬರೊಬ್ಬರಿ 2,54,030 ರೂ. ವಂಚನೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗೋಕುಲ ರಸ್ತೆ ರಾಮಲಿಂಗೇಶ್ವರ ನಗರದ ನಿವಾಸಿ ವಿಜಯಮಹಾಂತೇಶ ಎಂಬುವರಿಗೆ ಅಪರಿಚಿತನು ಕರೆ ಮಾಡಿ, ನಿಮ್ಮ ಕ್ರೆಡಿಟ್ ಕಾರ್ಡ್ ನ್ನು ಅಪ್ಡೇಟ್ ಮಾಡಬೇಕು ಏನಿಡೆನ್ಸ್ ರಿಮೋಟ್ ಡೆಸ್ಕ್ ಟಾಪ್ ಆ್ಯಪ್ ಡೌನ್ಲೋಡ್ ಮಾಡಿಸಿ, ಕಾರ್ಡ್ ನ ಎಲ್ಲ ಮಾಹಿತಿ ಮತ್ತು ಒಟಿಪಿ ಪಡೆದು, ಅದರ ಸಹಾಯದಿಂದ ಬರೊಬ್ಬರಿ 2,54,030 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/08/2022 11:40 am