ಧಾರವಾಡ: ಅಂಗಡಿಯ ಶೆಟ್ಟರ್ಸ್ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿನ 40 ಸಾವಿರ ರೂಪಾಯಿ ಕಳ್ಳತನ ಮಾಡಿಕೊಂಡು ಹೋದ ಘಟನೆ ಧಾರವಾಡ ಮಾಳಮಡ್ಡಿಯ ಯಮ್ಮಿಕೇರಿಯಲ್ಲಿ ನಡೆದಿದೆ.
ಯಮ್ಮಿಕೇರಿಯ ಚೆನ್ನಬಸವೇಶ್ವರ ಮಾರ್ಕೇಟ್ ಕಾಂಪ್ಲೆಕ್ಸ್ ದಲ್ಲಿನ ನಾಗರಾಜ ಗೌರಮ್ಮನವರ ಎಂಬುವವರಿಗೆ ಸೇರಿದ ಕಿರಣ್ ಜನರಲ್ ಸ್ಟೋರ್ಸ್ ನಲ್ಲಿ ಈ ಕಳ್ಳತನ ನಡೆದಿದೆ.
ರಾತ್ರಿ ಹೊತ್ತು ಕಾಂಪ್ಲೆಕ್ಸ್ದಲ್ಲಿನ ಸಿಸಿ ಕ್ಯಾಮೆರಾಗಳನ್ನು ಮೊದಲು ಒಡೆದು ಕಿತ್ತು ಹಾಕಿದ ಕಳ್ಳರು, ಬಳಿಕ ಅಂಗಡಿಯ
ಶೆಟ್ಟರ್ಸ್ ಕಟ್ ಮಾಡಿ ಒಂದು ತುಂಡು ತೆಗೆದು ಒಳನುಗ್ಗಿ 40 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
31/07/2022 08:54 pm