ಹುಬ್ಬಳ್ಳಿ: ಪಾರ್ಕ್ ಮಾಡಿದ್ದ ಕಾರಿಗೆ ಯುವಕನೊಬ್ಬ ಕಲ್ಲೆಸೆದು ಗ್ಲಾಸ್ ಪುಡಿಗೈದ ಘಟನೆ ನಗರದ ಐ.ಬಿ. ರಸ್ತೆಯಲ್ಲಿ ನಡೆದಿದ್ದು, ಆ ಯುವಕನನ್ನು ಕಾರಿನ ಮಾಲೀಕ ಹಿಡಿದು ಸ್ಥಳದಲ್ಲೇ ಥಳಿಸಿದ ವೀಡಿಯೊ ವೈರಲ್ ಆಗಿದೆ.
ಹೌದು... ಐ.ಬಿ. ರಸ್ತೆಯಲ್ಲಿ ಮಾಲೀಕ ಕಾರನ್ನು ಸೈಡ್ ಪಾರ್ಕ್ ಮಾಡಿ ಹೋಗಿದ್ದ. ಯುವಕನೊಬ್ಬ ದಿಢೀರ್ ಬಂದು ಕಾರಿನ ಮುಂಭಾಗದ ಗ್ಲಾಸ್‌ಗೆ ಕಲ್ಲು ಎಸೆದು, ಪುಡಿ ಪುಡಿ ಮಾಡಿದ್ದಾನೆ. ಸ್ಥಳದಲ್ಲಿ ಇದ್ದ ಮಾಲೀಕನೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ವೀಡಿಯೊ ಸದ್ಯ ವೈರಲ್ ಆಗಿದೆ.
Kshetra Samachara
30/07/2022 10:19 pm