ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಟ್ಯೂಬ್ ಲೈಟ್ ಗಾಜು ತಿಂದು ಆತ್ಮಹತ್ಯೆಗೆ ಯತ್ನಿಸಿದ ಕೈದಿಗಳು

ಧಾರವಾಡ: ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸುತ್ತಿದ್ದ ಕೈದಿಗಳಿಬ್ಬರು ಜೈಲಿನ ಕೊಠಡಿಯಲ್ಲಿದ್ದ ಟ್ಯೂಬ್ ಲೈಟ್ ತಿಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಚಂದ್ರು ಹಾಗೂ ಪ್ರಮೋದ ಎಂಬ ಕೈದಿಗಳೇ ಆತ್ಮಹತ್ಯೆಗೆ ಯತ್ನಿಸಿದವರು ಎಂದು ತಿಳಿದು ಬಂದಿದೆ.

ಎಂದಿನಂತೆ ಊಟ ಮುಗಿಸಿದ ಇಬ್ಬರೂ ಕೈದಿಗಳು ಕೊಠಡಿಯೊಳಗೆ ಹೋಗಿ ಟ್ಯೂಬ್ ಲೈಟ್ನ ಗಾಜನ್ನು ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಏಕೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

Edited By : Shivu K
Kshetra Samachara

Kshetra Samachara

29/07/2022 07:05 pm

Cinque Terre

82.14 K

Cinque Terre

0

ಸಂಬಂಧಿತ ಸುದ್ದಿ