ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಣಕಲ್ ಕೆರೆಯಲ್ಲಿ ಮಹಿಳೆ ಶವ: ಕೊಲೆಯೋ ಆತ್ಮಹತ್ಯೆಯೋ ?

ಹುಬ್ಬಳ್ಳಿ:ನಗರದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಈಗಷ್ಟೇ ಪತ್ತೆಯಾಗಿದೆ.

ಶುಕ್ರವಾರ ಉಣಕಲ್ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಸ್ಥಳೀಯರು, ಮಹಿಳೆಯ ಶವವನ್ನು ನೋಡಿ ವಿದ್ಯಾನಗರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಠಾಣೆಯ ಪೊಲೀಸರು ಮಹಿಳೆಯ ಶವವನ್ನು ಕೆರೆಯಿಂದ ತೆಗೆದಿದ್ದು ಸುಮಾರು 30 ರಿಂದ 40 ವರ್ಷದ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದ್ದು ಮಹಿಳೆ ಯಾರು ಎಂಬ ಪತ್ತೆಗೆ ಪೊಲೀಸರು

ಮುಂದಾಗಿದ್ದಾರೆ.

ಮಹಿಳೆಯ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ಶವಾಗಾರಕ್ಕೆ ರವಾನಿಸಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

Edited By : Shivu K
Kshetra Samachara

Kshetra Samachara

29/07/2022 01:19 pm

Cinque Terre

41.32 K

Cinque Terre

2

ಸಂಬಂಧಿತ ಸುದ್ದಿ