ಹುಬ್ಬಳ್ಳಿ: ವಾಸ್ಕೋ-ಯಶವಂತಪುರ ರೈಲಿನಲ್ಲಿ ಗೋವಾದಿಂದ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಆಂಧ್ರ ಪ್ರದೇಶ ಮೂಲದ ಓರ್ವನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಅಂದಾಜು 16,875 ರೂ. ಮೌಲ್ಯದ 600 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಗೌಂಡಿ ಕೆಲಸ ಮಾಡಿಕೊಂಡ ಗುಂಟೂರ ಜಿಲ್ಲೆ ಬಾಪಟ್ಟಿ ತಾಲೂಕು ಚಿರಾಲಾ ವಾರ್ಡರೆವು ಗ್ರಾಮದ ಸಾಯಿ ಬಂಧಿತನಾದವ.
ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/07/2022 12:14 pm