ಹುಬ್ಬಳ್ಳಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ತಾಲ್ಲೂಕಿನ ಕರಡಿಕೊಪ್ಪ ಗ್ರಾಮದ ರಿ.ಸ.ನಂ : 12/3ರಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಒಂದು ಜೆಸಿಬಿ ಹಾಗೂ ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.
ಹೌದು. KA24 M 6320 ನಂಬರ್‌ನ ಜೆಸಿಬಿ ಹಾಗೂ KA 63 9512 ನಂಬರ್‌ನ ಟಿಪ್ಪರ್ ಲಾರಿ ಜಪ್ತಿ ಮಾಡಿದ್ದಾರೆ. ಇನ್ನೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಛಬ್ಬಿ ಹೊರವಲಯ ಪೊಲೀಸ್ ಠಾಣೆ ವಶಕ್ಕೆ ವಾಹನಗಳನ್ನು ನೀಡಲಾಗಿದೆ. ಈಗಾಗಲೇ ಇಲಾಖೆಯಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭೂವಿಜ್ಞಾನಿ ಮಹೇಶ ಗೌಡನಾಯ್ಕರ್ ತಿಳಿಸಿದ್ದಾರೆ.
Kshetra Samachara
27/07/2022 08:08 pm