ಹುಬ್ಬಳ್ಳಿ: ವಿದ್ಯುತ್ ಬಿಲ್ ಕಟ್ಟದಿದ್ದ ಕಾರಣ, ನಿಮ್ಮ ಮನೆ ವಿದ್ಯುತ್ ಇಂದು ರಾತ್ರಿಯಿಂದ ಕಟ್ ಮಾಡಲಾಗುವುದು ಎಂದು ಸಂದೇಶ ಕಳುಹಿಸಿ, ನಿವೃತ್ತ ನೌಕರನಿಗೆ 4.93 ಲಕ್ಷ ರೂ ವಂಚಿಸಿದ್ದಾರೆ.
ಧಾರವಾಡ ಪಿ.ಬಿ. ಪಾಟೀಲ ಎಂಬುವರಿಗೆ ವಂಚಿಸಲಾಗಿದ್ದು, ಮೊಬೈಲ್ ಗೆ ಸಂದೇಶ ಬಂದ ಕಾರಣ ಕರೆ ಮಾಡಿ ಮಾತನಾಡಿದಾಗ ಅಪಡೇಟ್ ಮಾಡುವುದಾಗಿ ನಂಬಿಸಿದ್ದಾರೆ. ನಂತರ ವಿವಿಧ ಲಿಂಕ್ ಡೌನ್ಲೋಡ್ ಮಾಡಿಸಿ 4,93,542 ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/07/2022 11:28 am