ಹುಬ್ಬಳ್ಳಿ: ಹಾರ್ಡ್‌ವೇರ್ ವ್ಯಾಪರಸ್ಥರೊಬ್ಬರಿಗೆ ಸ್ಟೀಲ್ ಪೈಪ್‌ಗಳನ್ನು ಕಳುಹಿಸಿ ಕೊಡುವುದಾಗಿ ನಂಬಿಸಿ 59 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆಯೊಂದು ನಡೆದಿದೆ.
ನಗರದ ಮಂಗಳವಾರಪೇಟೆ ಜಯಂತಿಲಾಲ್ ಬೋಹರಾ ಎಂಬುವರೇ ವಂಚನೆಗೊಳಗಾದವರು. ಹಾರ್ಡ್ವೇರ್ ವ್ಯಾಪಾರ ಮಾಡಲು ಸ್ಟೀಲ್ ಪೈಪ್‌ಗಳನ್ನು ಕಳುಹಿಸುತ್ತೇನೆಂದು ಹೇಳಿದ ವಂಚಕರು, ಅವರ ಬ್ಯಾಂಕ್ ಖಾತೆಯಿಂದ 59 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾರೆ. ಆದರೆ ಸ್ಟೀಲ್ ಕಳುಹಿಸದೇ, ಆನ್‌ಲೈನ್‌ನಲ್ಲಿ ವರ್ಗಾಯಿಸಿದ ಹಣವನ್ನು ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/07/2022 12:45 pm