ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಬೇಸತ್ತು ಕುಟುಂಬವೊಂದು ಸರ್ವನಾಶವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಸುನೀಲ್ ದೊಂಗಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಸಹೋದರನ ಆತ್ಮಹತ್ಯೆ ಸುದ್ದಿ ತಿಳಿದು ರಾಜು ದೊಂಗಡಿ ಕುಸಿದು ಸಾವನ್ನಪ್ಪಿದ್ದಾರೆ.
ಸುನೀಲ್ ದೊಂಗಡಿ ನಿನ್ನೆ (ಸೋಮವಾರ) ರಾತ್ರಿ ಗೆಳೆಯ ಹಾಗೂ ಸಹೋದರನಿಗೆ ವಾಟ್ಸಾಪ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಬಿದ್ದಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದು ಸಹೋದರನ ಮೊಬೈಲ್ ಚಪ್ಪಲಿ ನೋಡಿದ ರಾಜು ದೊಂಗಡಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕುಟುಂಬದ ಆಧಾರ ಸ್ತಂಬವೇ ಕಳಚಿ ಬಿದ್ದಂತಾಗಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/07/2022 05:13 pm