ಧಾರವಾಡ: ಧಾರವಾಡದ ಹೊರವಲಯದಲ್ಲಿರುವ ನುಗ್ಗಿಕೇರಿ ಗುಡ್ಡದ ಬಳಿ ಯುವಕನೋರ್ವನ ಕತ್ತನ್ನು ಸೀಳಿರುವ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.ಹಾವೇರಿ ಮೂಲದ ನವೀನ್ ದೊಡಮನಿ (30) ಎಂಬಾತನೇ ಚಾಕು ಇರಿತಕ್ಕೆ ಒಳಗಾದವನು. ಈತ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.
ನುಗ್ಗಿಕೇರಿ ಗುಡ್ಡದ ಮೇಲೆ ಯಾರೋ ನಾಲ್ಕೈದು ಜನ ಸೇರಿಕೊಂಡು ನವೀನ್‌ನ ಕುತ್ತಿಗೆಗೆ ಚಾಕು ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾದ ನವೀನ್ ಗುಡ್ಡದ ಮೇಲಿಂದ ಓಡೋಡಿ ಬಂದು ತನ್ನ ಪ್ರಾಣ ಉಳಿಸುವಂತೆ ಸ್ಥಳೀಯರಿಗೆ ಗೋಗರೆದಿದ್ದಾನೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ಈ ಮಾಹಿತಿ ಮುಟ್ಟಿಸಿ ಸದ್ಯ ನವೀನನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದಾರೆ.ನವೀನ್‌ನ ಮೇಲೆ ದಾಳಿ ಮಾಡಿದವರು ಯಾರು? ಯಾತಕ್ಕಾಗಿ ದಾಳಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
18/07/2022 10:38 pm