ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿಲ್ಲರೆ ಕೇಳಲು ಬಂದು 73 ಸಾವಿರ ರೂ.ಎಗರಿಸಿದ ಯುವ ಪ್ರೇಮಿಗಳು!

ಹುಬ್ಬಳ್ಳಿ:ಚಿಲ್ಲರೆ ಕೇಳುವ ನೆಪದಲ್ಲಿ ಆಟೋಲಿಂಕ್ಸ್ ಕಚೇರಿಗೆ ಬಂದಿದ್ದ ಅಪರಿಚಿತ ಯುವಕ ಹಾಗೂ ಯುವತಿಯು ನೌಕರನ ಗಮನ ಬೇರೆಡೆ ಸೆಳೆದು 73,500 ರೂ.2 ಕಳ್ಳತನ ಮಾಡಿಕೊಂಡು ಹೋದ ಘಟನೆ ನೂರಾನಿ ಮಾರ್ಕೆಟ್ ನಲ್ಲಿ ನಡೆದಿದೆ.

ಆಟೋ ಕನ್ಸಲ್ಟಂಟ್ ಕಚೇರಿಯ ಸಹಾಯಕ ಮೊಹಮ್ಮದ್ ಅಖಿಲ್ ಹಣ ಕಳೆದುಕೊಂಡಿದ್ದಾರೆ. ಓರ್ವರಿಂದ 1.76 ಲಕ್ಷ ರೂ. ಇಸಿದುಕೊಂಡು ಬಂದು ಕಚೇರಿಯಲ್ಲಿ ಕುಳಿತಿದ್ದಾಗ, ಯುವಕ -ಯುವತಿ ಬಂದು ಎರಡು ಸಾವಿರ ರೂ. ಮುಖಬೆಲೆಯ ನೋಟು ಕೊಟ್ಟು ಚಿಲ್ಲರೆ ಕೊಡುವಂತೆ ಕೇಳಿದ್ದಾರೆ.

ಅವರು 500 ರೂ. ಮುಖಬೆಲೆಯ ನಾಲ್ಕು ನೋಟು ಕೊಟ್ಟಾಗ, 100, 200 ರೂ. ಮುಖಬೆಲೆಯ ನೋಟು ಕೊಡುವಂತೆ ಹೇಳಿ ಇಸಿದುಕೊಂಡಿದ್ದಾರೆ. ಬಳಿಕ ಯುವತಿಯು ಗಮನ ಬೇರೆಡೆ ಸೆಳೆದಿದ್ದು 1.76 ಲಕ್ಷ ರೂ.ಗಳ ಕಂತಿನಲ್ಲಿ 73,500 ರೂ ಎಗರಿಸಿದ್ದಾರೆ ಎಂದು ಮೊಹ್ಮದ್ ಅಖಿಲ್ ಕಮರಿಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ . ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By :
Kshetra Samachara

Kshetra Samachara

18/07/2022 11:27 am

Cinque Terre

43.41 K

Cinque Terre

2

ಸಂಬಂಧಿತ ಸುದ್ದಿ