ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮನೆ ಕೀಲಿ ಒಡೆದು 40 ಗ್ರಾಂ ಚಿನ್ನ 2 ಲಕ್ಷ 50 ಸಾವಿರ ಹಣ ಕಳ್ಳತನ

ಕುಂದಗೋಳ : ಮನೆಯಲ್ಲಿ ಯಾರು ಇಲ್ಲದ ವೇಳೆ ಹೊಂಚು ಹಾಕಿದ ಕಳ್ಳರು ಮನೆ ಬಾಗಿಲು ಕೀಲಿ ಒಡೆದು ಒಳಗೆ ನುಗ್ಗಿ 40 ಗ್ರಾಂ ಬಂಗಾರದ ಆಭರಣ ಹಾಗೂ 2 ಲಕ್ಷ 50 ಸಾವಿರ ನಗದು ಹಣ ಕಳ್ಳತನ ಮಾಡಿ ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಹೌದು ! ಹಿರೇಹರಕುಣಿಯ ಲಕ್ಷ್ಮೀ ಬಸವರಾಜ ಹಡಪದ ಎಂಬುವವರ ತವರು ಮನೆಗೆ ನುಗ್ಗಿದ ಕಳ್ಳರು 10 ಗ್ರಾಂ ತೂಕದ ಒಂದು ಬಂಗಾರದ ಸರ, 20 ಗ್ರಾಂ ತೂಕದ ಒಂದು ಬಂಗಾರದ ಸರ, 05 ಗ್ರಾಂ ತೂಕದ ಒಂದು ಬಂಗಾರದ ಗೊರಮಾಳ ಸರ, 05 ಗ್ರಾಂ ತೂಕದ ಒಂದು ಬಂಗಾರದ ಗುಂಡಿನ ಸರ, 03 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿಯೋಲೆ, 5 ಗ್ರಾಂ ತೂಕದ ಒಂದು ಸುತ್ತುಂಗರ ಸೇರಿ ಒಟ್ಟು 2 ಲಕ್ಷ 50 ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಮಂಗಳವಾರದಿಂದ ಬುಧವಾರ ರಾತ್ರಿ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆ ಬಾಗಿಲು ಕೀಲಿ ಒಡೆದು ದೇವರಕೋಣೆಗೆ ನುಗ್ಗಿ ಟ್ರಿಜುರ್ ಕೀಲಿ ತೆಗೆದುಕೊಂಡು ಟ್ರಿಜುರಿ ತೆಗೆದು ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

15/07/2022 06:55 pm

Cinque Terre

23.43 K

Cinque Terre

0

ಸಂಬಂಧಿತ ಸುದ್ದಿ