ಹುಬ್ಬಳ್ಳಿ: ಕಳೆದ ತಿಂಗಳು ತುಂಬಿದ ವಿದ್ಯುತ್ ಬಿಲ್ ಅಪಡೇಟ್ ಆಗದ ಹಿನ್ನೆಲೆಯಲ್ಲಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನಂಬಿಸಿ, ವ್ಯಕ್ತಿಯೊಬ್ಬರಿಗೆ ಆ್ಯಪ್ ಡೌನ್ ಲೋಡ್ ಮಾಡಿಸಿ ಸುಮಾರು 99 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.
ಕುಸುಗಲ್ ರಸ್ತೆ ಭಾಸ್ಕರ್‌ರಾವ್ ದಾರ್ಲಾ ಎಂಬುವರೆ ವಂಚನೆಗೊಳಗಾದವರು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ವಂಚಕರು ಕಳುಹಿಸಿದ ಸಂದೇಶ ನಂಬಿದ ಇವರು, ಸಂದೇಶದಲ್ಲಿ ಕಳುಹಿಸಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಬಳಿಕ ಕರೆಂಟ್ ಬಿಲ್ ಅಪಡೇಟ್ ಮಾಡುವ ನೆಪದಲ್ಲಿ ಆ್ಯಪ್ ಡೌನ್ ಮಾಡಿಸಿ ಹಂತ ಹಂತವಾಗಿ 99,907 ರೂ. ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸೈಬರ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/07/2022 02:19 pm