ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ಕುತ್ತಿಗೆಯಲ್ಲಿ ಚಾಕು ಬಿಟ್ಟ ತಂದೆ: ವೈದ್ಯರಿಗೆ ಚಾಕು ಸವಾಲ್

ಹುಬ್ಬಳ್ಳಿ: ಇಂದು ಬೆಳಗಿನ ಜಾವ 4.30 ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಹೇಗ್ಗೆರಿ ಕಾಲೋನಿಯಲ್ಲಿ ತಂದೆಯಿಂದ ಮಗನಿಗೆ ಚಾಕು ಇರಿದ ಪ್ರಕರಣ ವರದಿ ಆಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಆಸ್ಪತ್ರೆ ಸೇರಿರುವ ಗಾಯಾಳು ಜಗದೀಶ್ ಕುತ್ತಿಗೆಯಲ್ಲಿ 5 ಇಂಚು ಚಾಕು ಸಿಲುಕಿಕೊಂಡಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಜಗದೀಶನಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದು ಯಶಸ್ವಿ ಆಗಲಿದಿಯಾ ಎಂದು ಕಾದು ನೋಡಬೇಕಿದೆ. ಅಲ್ಲದೆ ಜಗದೀಶ್ ಪ್ರಾಣಕ್ಕೂ ಅಪಾಯವಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಇನ್ನು ಚಾಕು ಇರಿದಿರುವ ತಂದೆ ರಾಮಕೃಷ್ಣ ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

12/07/2022 06:22 pm

Cinque Terre

24.54 K

Cinque Terre

0

ಸಂಬಂಧಿತ ಸುದ್ದಿ