ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ತನ್ನ ತಾಯಿಗೆ ನಿಂದನೆ ಮಾಡಿದ್ದಕ್ಕೆ ತಲೆ ಮೇಲೆ ಕಲ್ಲು ಹಾಕಿ ಕೊಲೆಗೆ ಯತ್ನ!

ಹುಬ್ಬಳ್ಳಿ: ತನ್ನ ತಾಯಿಯನ್ನು ನಿಂದಿಸಿದ ಕಾರಣಕ್ಕೆ 9 ಜನರು ಓರ್ವ ಯುವಕನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಉದಯನಗರದ ಕ್ರಾಸ್ ಬಳಿ ನಡೆದಿದೆ.

ಹೌದು. ಗೋಪನಕೊಪ್ಪದ ಕಡೆ ಓಣಿಯ ಮಲ್ಲಿಕಾರ್ಜುನ, ದೇವಸ್ಥಾನ ಹತ್ತಿರ ಎಗ್ ರೈಸ್ ತಿನ್ನುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಮಡಿವಾಳಪ್ಪ ಎಂಬುವವ ಮಂಕನಗನೌಡ ಪಾಟೀಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾನೆ. ಇದರಿಂದ ಮಾತಿಗೆ ಮಾತು ಬೆಳೆದು ಕೊನೆಗೆ ಮಂಕನಗೌಡ ತನ್ನ 9 ಗೆಳಯರೊಂದಿಗೆ ಮಂಜುನಾಥ ಮಡಿವಾಳಪ್ಪನನ್ನ ಅಪಹರಣ ಮಾಡಿಕೊಂಡು ಉದಯ ನಗರ ಕ್ರಾಸ್ ಬಳಿಯ ಖುಲ್ಲಾ ಜಾಗೆಯಲ್ಲಿ ಹಲ್ಲೆ ಮಾಡಿದ್ದಾನೆಂದು ದೂರಿನಲ್ಲಿ ದಾಖಲಿಸಲಾಗಿದೆ.

ಬಸವರಾಜ ಭಜಂತ್ರಿ, ಕಿರಣ ಮಾನೆ, ಮಾರುತಿ ಪೂಜಾರಿ, ಪ್ರಭು, ಈರಣ್ಣ ಬಟ್ಟೂರ, ಇನ್ನು ಮೂವರ ಹೆಸರು ಗೊತ್ತಾಬೇಕಿದ್ದು ಇವರು ಸೇರಿಕೊಂಡು ಕಲ್ಲು ಹಾಗೂ ಬಾಟಲಿಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ್ದು, ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Edited By :
Kshetra Samachara

Kshetra Samachara

11/07/2022 09:35 am

Cinque Terre

40.93 K

Cinque Terre

3

ಸಂಬಂಧಿತ ಸುದ್ದಿ