ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪತಿಗೆ ತಿಳಿದ ಅನೈತಿಕ ಸಂಬಂಧ; ಪತ್ನಿಯಿಂದ ಮತಾಂತರ ನಾಟಕ; ಮಕ್ಕಳ ಸ್ಥಿತಿ ಅಯೋಮಯ!

ಹುಬ್ಬಳ್ಳಿ: ಅವರಿಬ್ಬರೂ ಕಳೆದ 11 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು. ಈಗ ಅವರಿಬ್ಬರ ನಡುವೆ ಬಿರುಗಾಳಿ ಎದ್ದಿದೆ. ಪತ್ನಿ ಬೇರೊಬ್ಬನ ಜೊತೆ ಲವ್ವಡವ್ವಿ ಆರಂಭ ಮಾಡಿದ್ದಾಳೆ. ಇದು ಪತಿಗೆ ಗೊತ್ತಾಗಿದ್ದರಿಂದ ಅದನ್ನ ಮುಚ್ಚಿ ಹಾಕಲು ಹೆಂಡತಿ ಮತಾಂತರ ಕಾಯ್ದೆಯನ್ನ ಬಂಡವಾಳ ಮಾಡಿಕೊಂಡಿದ್ದಾಳೆ. ಇದರಿಂದ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತು ಇಲ್ಲಿ ನಿಜವಾಗಿದೆ.

ಪ್ರೀತಿಸಿ ಮದುವೆಯಾಗಿ ಈಗ ಮತಾಂತರದ ನಾಟಕವಾಡುತ್ತಿರುವ ಪತ್ನಿ. ಇದರಿಂದ ನೊಂದು ನ್ಯಾಯಕ್ಕಾಗಿ ಪತಿಯ ಅಲೆದಾಟ. ಮತಾಂತರ ಎಂದು ಹೇಳಿ ತಂದೆಯಿಂದ ಮಕ್ಕಳನ್ನ ದೂರ ಮಾಡಿದ ಪತ್ನಿ. ಮಕ್ಕಳ‌ ಮುಖ ನೋಡಲು ಅಂಗಲಾಚುತ್ತಿರುವ ಪತಿ‌.

ಹೌದು, 11 ವರ್ಷಗಳ ಹಿಂದೆ ಗದಗ ಮೂಲದ ಸುಕನ್ಯಾ ಎನ್ನುವ ಯುವತಿ, ಹುಬ್ಬಳ್ಳಿ ಮ‌ೂಲದ ಜೀವನ್ ಕುಮಾರ್ ಜೊತೆ ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಮೇಲೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಜನನವಾಗಿದೆ. ನಾಲ್ಕು ವರ್ಷದಿಂದ ಸುಕನ್ಯಾ ಬೇರೆ ಯುವಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಈ ವಿಷಯ ಐದು ತಿಂಗಳ ಹಿಂದೆ ಪತಿಗೆ ಗೊತ್ತಾಗಿದೆ. ಪತಿಗೆ ವಿಷಯ ತಿಳಿಯುತ್ತಿದಂತೆ ಪತ್ನಿ ಸುಕನ್ಯಾ ಹೊಸ ವರಸೆ ಶುರು ಮಾಡಿದ್ದಾಳೆ. ಅನೈತಿಕ ಸಂಬಂಧ ಮುಚ್ಚಿಡಲು ಪತ್ನಿ ಪತಿಯ ಮೇಲೆ ಸುಳ್ಳು ಸುಳ್ಳು ಕೇಸ್ ಹಾಕಲು ಮುಂದಾಗಿದ್ದಾಳಂತೆ.

ಕ್ರೈಸ್ತ ಧರ್ಮದ ಆಚಾರ ವಿಚಾರ ಪಾಲನೆ ಮಾಡುವಂತೆ ಪತಿ ಜೀವನ್, ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾಳಂತೆ. ಆದ್ರೆ, ಜೀವನ್ ಮಾತ್ರ ನಾನು ಕ್ರೈಸ್ತ ಸಮುದಾಯಕ್ಕೆ ಸೇರಿದವನ್ನಲ್ಲ. ಅಪ್ಪಟ ಹಿಂದು ಹುಡುಗನ ಮೇಲೆ ಮತಾಂತರ ಅಸ್ತ್ರ ಬಳಸುತ್ತಿದ್ದಾಳೆ. ನಾನು ಕ್ರೈಸ್ತ ಸಮುದಾಯಕ್ಕೆ ಸೇರಿದವನಲ್ಲವೆಂದು ಪತ್ನಿಯ ಅನೈತಿಕ ಸಂಬಂಧದ ದಾಖಲೆ ಹಿಡಿದುಕೊಂಡು ಜೀವನ್ ಕುಮಾರ್ ನೇರವಾಗಿ ಆರೋಪ ಮಾಡುತ್ತಿದ್ದಾರೆ.

ಇನ್ನು, ಜೀವನ್ ಪತ್ನಿಯು ಇಲ್ಲದೆ, ಮಕ್ಕಳೂ ಇಲ್ಲದೆ ಏಕಾಂಗಿಯಾಗಿದ್ದಾರೆ. ಈಗ ಮಕ್ಕಳು ಬೇಕೆಂದು ಕೋರ್ಟ್ ‌ಮೆಟ್ಟಲು ಹತ್ತಲು ಜೀವನ್ ತೀರ್ಮಾನಿಸಿದ್ದಾರೆ. ಆದ್ರೆ, ಇಲ್ಲಿ ಗಂಡ - ಹೆಂಡತಿ ಜಗಳ ನಡುವೆ ಇಬ್ಬರೂ ಮಕ್ಕಳಿಗೆ ಮಾತ್ರ ಎತ್ತ ಹೋಗಬೇಕೆನ್ನುವುದು ಮಾತ್ರ ತಿಳಿಯುತ್ತಿಲ್ಲ. ಪ್ರಪಂಚದ ಬಗ್ಗೆ ಏನೂ ಅರಿಯದ ಮಕ್ಕಳು ಅಪ್ಪ-ಅಮ್ಮನ ಜಂಜಾಟದಲ್ಲಿ ಸಿಲುಕಿಗೊಂಡಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/07/2022 01:32 pm

Cinque Terre

145.16 K

Cinque Terre

23

ಸಂಬಂಧಿತ ಸುದ್ದಿ