ಕುಂದಗೋಳ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ.
ರಾಮನಕೊಪ್ಪ ಗ್ರಾಮದ ರಜಾಕಸಾಬ್ ದಾವಲಸಾಬ್ ನದಾಫ್ ವಯಾ (46) ಮೃತ ವ್ಯಕ್ತಿ. ರಜಾಕಸಾಬ್ ವಿಪರೀತ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಮನೆಯವರು ಕುಡಿತ ಬಿಡು ಎಂದು ಎಷ್ಟು ಬಾರಿ ಹೇಳಿದರೂ ಬಿಟ್ಟಿರಲಿಲ್ಲ. ಕಳೆದ ಬುಧವಾರ ಜೂ.6ರಂದು ಕುಡಿದ ಮತ್ತಿನಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ಘಟನೆ ಕುರಿತಂತೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/07/2022 12:21 pm