ಹುಬ್ಬಳ್ಳಿ: ದುಡಿಯಲಿಕ್ಕೆ ಗೋವಾಕ್ಕೆ ತೆರಳಿದ ಸಂದರ್ಭ ನೋಡಿ, ಮನೆಯಲ್ಲಿದ್ದ 30 ಸಾವಿರ ರೂ,ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ನಗರದ ಗೋಕುಲ ರಸ್ತೆ ಬಂಜಾರ ಕಾಲನಿಯಲ್ಲಿ ಕಳ್ಳತನ ನಡೆದಿದೆ.
ಶಾರದಾ ಚವ್ಹಾಣ ಎಂಬುವರು ದುಡಿಯಲು ಗೋವಾಕ್ಕೆ ತೆರಳಿದಾಗ, ಕಳ್ಳರು ಅವರ ಮನೆ ಬೀಗ ಮುರಿದು ಒಳ ಪ್ರವೇಶಿಸಿ 6 ಸಾವಿರ ರೂ. 80 ಗ್ರಾಂ ಬೆಳ್ಳಿ ಮತ್ತು 5 ಗ್ರಾಂ ಬಂಗಾರ ಕಳ್ಳತನ ಮಾಡಿದ್ದಾರೆಂದು ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
08/07/2022 01:01 pm