ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ರಿವೀಲ್ ಮಾಡ್ತಿದೆ ಹಂತಕರ ಮಹಾ ಪ್ಲ್ಯಾನ್. ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಗೆ ಹಂತಕರು ಮೊದಲೆ ಸರಿಯಾಗಿ ಪ್ಲ್ಯಾನ್ ಮಾಡಿದ್ದರು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.
ಇನ್ನು ಕೊಲೆ ನಡೆದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ನಿನ್ನೆ (ಬುಧವಾರ) ಅಷ್ಟೇ ಹಂತಕರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೂಲಕ, ಹೆಚ್ವುವರಿ ವಿಚಾರಣೆಗಾಗಿ, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇನ್ನು ಹಂತಕರನ್ನು ಸುದೀರ್ಘ ವಿಚಾರಣೆಗೊಳಪಡಿಸಿರುವ ಪೊಲೀಸರಿಗೆ ಹಂತಕರಿಂದ ಮಹಾಪ್ಲ್ಯಾನ್ ಹೊರ ಬಿದ್ದಿದೆ.
ಜುಲೈ 3 ರಂದೇ ಗುರೂಜಿ ಹತ್ಯೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದ ಅಂಶವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಇದಕ್ಕೂ ಮೊದಲು ಗುರೂಜಿ ಹುಬ್ಬಳ್ಳಿಗೆ ಬಂದ ದಿನದಂದೇ ಹಂತಕರು ಸಹ ನಗರದ ಖಾಸಗಿ ಹೋಟೆಲ್ ಒಂದರಲ್ಲೇ ರೂಂ ಮಾಡಿಕೊಂಡಿದ್ದರು. ಅವತ್ತೇ ಗುರೂಜಿಯನ್ನು ಹತ್ಯೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರೂಜಿ ಇದ್ದಲ್ಲಿಯೇ ಹೋದರೂ ಅವರನ್ನು ಹಿಂಬಾಲಿಸುವ ಮೂಲಕ, ಅವರ ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದ ಹಂತಕರು, ಹೋಟೆಲ್‌ನ ರೂಂ ನಂ 305ರಲ್ಲಿದ್ದರು. ಕಳೆದ ಎರಡ್ಮೂರು ದಿನದಿಂದ ಗುರೂಜಿ ಅಕ್ಕ ಪಕ್ಕವೇ ಓಡಾಡಿಕೊಂಡಿದ್ದರು. ಆದರೆ ಈ ನಡುವೆ ಗುರೂಜಿಯ ಮೊಮ್ಮಗನ ಸಾವಾಗಿದ್ದರಿಂದ ಸುಮ್ಮನಾಗಿದ್ದರಂತೆ. ನಂತರ ಸ್ವಾಮೀಜಿಗೆ ಫೋನ್ ಮಾಡಿ ಪ್ರೆಸಿಡೆಂಟ್ ಹೋಟಲ್‌ಗೆ ಬಂದಿದ್ದಾರೆ. ಕೆಲಸದಿಂದ ತೆಗೆದ ಸಿಟ್ಟು, ಆಸ್ತಿ ವಾಪಸ್ ಕೇಳಿದ್ದೇ ಕೊಲೆಗೆ ಕಾರಣವಾಗಿದೆಯಂತೆ.
ತಿಂಗಳಿಗೆ ಸುಮಾರು ಒಂದು ಲಕ್ಷ ಮೇಲ್ಪಟ್ಟು ಸಂಬಳ ತೆಗೆದುಕೊಳ್ಳುತ್ತಿದ್ದ ಮಹಾಂತೇಶ, ಕೆಲಸವಿಲ್ಲದೇ ಹಣ ಇಲ್ಲದೇ ಕಂಗಾಲಾಗಿದ್ದನಂತೆ. ಇದಾದ ಮೇಲೆ ಆಸ್ತಿಯೂ ವಾಪಸ್ ಕೇಳಿದ್ದಕ್ಕೆ ಮಹಾಂತೇಶ ಗುರೂಜಿಯನ್ನು ಮುಗಿಸಿಬಿಡುವ ಪ್ಲ್ಯಾನ್ ಹಾಕಿದ್ದನಂತೆ. ಗುರೂಜಿಗಾಗಿ ನಾವು ಏನೆಲ್ಲ ಮಾಡಿದ್ದೆವು ಆದ್ರೆ ಆತ ನಮ್ಮನ್ನೇ ಕಡೆಗಣಿಸಿದ್ದ ಹೀಗಾಗಿ ಕೊಲೆ ಮಾಡಿದ್ದೇವೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ತನ್ನ ಹಾಗೂ ಸ್ನೇಹಿತರ ಹೆಸರಲ್ಲಿ ಆಸ್ತಿ ಇರೋದಾಗಿ ಮಹಾಂತೇಶ ಒಪ್ಪಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 05:47 pm