ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ; ಮುಗಿಲು ಮುಟ್ಟಿದ ಆಕ್ರಂದನ

ಹುಬ್ಬಳ್ಳಿ: ಸಾವಿರಾರು ಜನರಿಗೆ ಉದ್ಯೋಗ ಕೊಟ್ಟು, ಸಾಕಷ್ಟು ಜನರ ಬಾಳಲ್ಲಿ ಬೇಳಕಾದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಹತ್ಯೆ ಮಾಡಿದ್ದಾರೆ. ಇಂದು ಕಿಮ್ಸ್ ಶವಾಗಾರದಿಂದ ಪಾರ್ಥಿವ ಶರೀರವನ್ನು ಹೊರಗೆ ತರುತ್ತಿದ್ದಂತೆ ಸಂಬಂಧಿಕರು, ಭಕ್ತರು, ಕಚೇರಿ ಸಿಬ್ಬಂದಿಯ ಆಕ್ರಂದನ ಮುಗಿಲು ಮುಟ್ಟಿತು.

ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ನಿನ್ನೆ ದಿನದಂದು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹಂತಕರು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದರು. ಹುಬ್ಬಳ್ಳಿ ಕಿಮ್ಸ್‌ನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ನಂತರ ಪಾರ್ಥಿವ ಶರೀರವನ್ನು ಹೊರ ತರುತ್ತಿದ್ದಂತೆ ಕಚೇರಿ ಸಿಬ್ಬಂದಿ, ಸಂಬಂಧಿಗಳು, ಸ್ನೇಹಿತರು ಸಾಲಾಗಿ ನಿಂತು ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗುರೂಜಿ ಅವರ ಪಾರ್ಥಿವ ಶರೀರ ನೋಡುತ್ತಿದ್ದಂತೆ ಬಂದಂತಹ ಭಕ್ತರು, ದೇವರು ನಮ್ಮನ್ನು ಅಗಲಿ ಹೋದರು. ಇನ್ಮುಂದೆ ನಾವು ಯಾರ ಹತ್ತಿರ ಕಷ್ಟ ಹೇಳಿಕೊಳ್ಳಬೇಕೆಂದು ಕಣ್ಣಿರು ಹಾಕಿದರು.

Edited By : Nagesh Gaonkar
Kshetra Samachara

Kshetra Samachara

06/07/2022 03:19 pm

Cinque Terre

34.47 K

Cinque Terre

1

ಸಂಬಂಧಿತ ಸುದ್ದಿ