ಹುಬ್ಬಳ್ಳಿ:ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ನಾಲ್ಕು ದಿನಗಳ ಹಿಂದೆಯೇ ನಡೆದಿತ್ತಾ ಗುರೂಜಿ ಹತ್ಯೆಗೆ ಸ್ಕೆಚ್ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಹೌದು.. ಈ ಎಲ್ಲ ಅನುಮಾನಕ್ಕೆ ಸಾಕ್ಷಿಯಾಗಿರುವುದು ಆರೋಪಿ ಮಹಾಂತೇಶ ಶಿರೂರ್ ಮಾಡಿರುವ ಪೋಸ್ಟ್ ಸ್ಕೆಚ್ ವಿಚಾರವನ್ನು ಬಿಚ್ಚಿಡುತ್ತಿದೆ. ಮಹಾಂತೇಶ ಶಿರೂರ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮಹಾಂತೇಶ್ ಶಿರೂರ್ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಭಗವದ್ಗೀತೆ ಶ್ಲೋಕವನ್ನ ಉಲ್ಲೇಖಿಸಿ ಪೋಸ್ಟ್ ಮಾಡಿದ ಮಹಾಂತೇಶ ನಾಲ್ಕು ದಿನಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿದ್ರಾ ಎಂಬ ಅನುಮಾನ ಕೇಳಿ ಬರುತ್ತಿದೆ.
Kshetra Samachara
06/07/2022 12:06 pm