ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ನಮಗೆ ನೋವನ್ನು ತಂದಿದೆ. ನಮಗೆ ಕೆಲಸ ಕೊಟ್ಟು ಅನ್ನ ಹಾಕಿದ್ದ ಅನ್ನದಾತ ಚಂದ್ರಶೇಖರ ಗುರೂಜಿ ಎಂದು ಹುಬ್ಬಳ್ಳಿ ಶವಾಗಾರ ಬಳಿ ಸರಳ ವಾಸ್ತು ಹಳೆ ಸಿಬ್ಬಂದಿ ಕೋಟೆಪ್ಪ ತಳಗೇರಿ ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಈ ಘಟನೆ ನೋವು ತಂದಿದೆ. ಕೊಲೆ ಮಾಡಿದ ಇಬ್ಬರೂ ಇಲ್ಲಿಯೇ ಕೆಲಸ ಮಾಡುತಿದ್ದರು. ಮಂಜುನಾಥ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದ. ಮಹಾಂತೇಶ ಟೀಮ್ ಹೆಡ್ ಆಗಿ ಕೆಲಸ ಮಾಡುತಿದ್ದರು. ಮಹಾಂತೇಶ ಪತ್ನಿ ಕೂಡ ಇಲ್ಲಿಯ ಸಿಬ್ಬಂದಿಯಾಗಿದ್ದರು. ಘಟನೆ ಏಕೆ ಆಗಿದೆ ಎಂದು ಗೊತ್ತಿಲ್ಲ.ಆದರೆ ಕೊಲೆ ನಡೆದ ಮಾಹಿತಿ ಸಿಕ್ಕ ತಕ್ಷಣ ನಾವು ಇಲ್ಲಿಗೆ ಬಂದಿದ್ದೆವೆ ಎಂದರು.
ಗುರೂಜಿ ನಮ್ಮನ್ನ ಮಕ್ಕಳಂತೆ ನೋಡಿಕೊಂಡಿದ್ದಾರೆ. ನಾವು ಅವರ ಅನ್ನ ಉಂಡಿದ್ದೇವೆ. ರೊಟ್ಟಿ ಹಾಕಿದ ಮಾಲೀಕನ ಋಣ ನಾಯಿಗೆ ಗೊತ್ತಿದೆ. ಅದರಲ್ಲಿ ಇವರು ಅವರ ಜೊತೆಯಲ್ಲಿದ್ದು ಈ ರೀತಿ ಮಾಡಿದ್ದಾರೆ. ಇವರೇ ಈ ರೀತಿ ಮಾಡಿದ್ದಾರೆ ಎಂದರೆ ಊಹೆ ಮಾಡಲು ಆಗುತ್ತಿಲ್ಲ. ಇದರಿಂದ ನಮಗೆ ಬಹಳ ದುಃಖ ಆಗಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/07/2022 06:51 pm