ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ಪೋರೇಟರ್ ಚೇತನ ಹಿರೇಕೆರೂರ ಅರೆಸ್ಟ್: ಯುವತಿ ಅಪಹರಣದ ಆರೋಪ

ಹುಬ್ಬಳ್ಳಿ: ನವವಿವಾಹಿತೆಯೊಬ್ಬಳನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾದ ಬೆನ್ನಲ್ಲೇ ಪೊಲೀಸರು ಕಾರ್ಪೊರೇಟರ್ ಚೇತನ ಹಿರೇಕೇರೂರನನ್ನು ಬಂಧಿಸಿದ್ದಾರೆ.

ಹೌದು..ನವವಿವಾಹಿತೆ ಸಹನಾ ಎಂಬುವವರನ್ನು ಅಪಹರಣ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನಿಖಿಲ್ ದಾಂಡೇಲಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಫ್ಐಆರ್ ಆಗಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ನಿಖಿಲ್ ದಾಂಡೇಲಿ ಹಾಗೂ ಸಹನಾ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪರಿಶೀಲನೆ ನಡೆಸಿದ ಕೋರ್ಟ್ ಐವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಪೋರೆಟರ್ ಚೇತನ ಹಿರೇಕೇರೂರ, ಶಿವು ಹಿರೇಕೇರೂರ ಹಾಗೂ ಲಕ್ಷ್ಮೀ ಹಿರೇಕೇರೂರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/07/2022 11:30 am

Cinque Terre

68.37 K

Cinque Terre

48

ಸಂಬಂಧಿತ ಸುದ್ದಿ