ಹುಬ್ಬಳ್ಳಿ: ಯುವಕನೊಬ್ಬ ತನ್ನ ಸ್ನೇಹಿತೆಯ ಜೊತೆಗೆ ಕಾರಿನಲ್ಲಿ ಕುಳಿತು ಮಾತನಾಡುತ್ತಿರುವಾಗ, 5 ಜನ ಅಪರಿಚಿತರು ಅವರನ್ನು ಸುತ್ತುವರೆದು ಅವರಿಗೆ ಹೆದರಿಸಿ ಬೆದರಿಸಿ ಅವರ ಹತ್ತಿರ ಇದ್ದ 600 ರೂ. ನಗದು ಹಣ, ಪರ್ಸ, ಮತ್ತು ಆಧಾರ್ ಕಾರ್ಡ್ ಕಿತ್ತುಕೊಂಡು ಹೋದ ಬಗ್ಗೆ ನಗರದ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಠಾಣೆಯ ಇನ್ಸ್ಪೆಕ್ಟರ್ ಜೆ.ಎಮ್ ಕಾಲಿಮಿರ್ಚಿ, ಮತ್ತು ತಂಡ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಒಂದೇ ದಿನದಲ್ಲಿ ಆರೋಪಿತರನ್ನು ಬಂಧಿಸಿ, ಅವರ ಹತ್ತಿರ ಕೃತ್ಯಕ್ಕೆ ಬಳಿಸಿದ ಒಂದು ಆರೆಂಜ ಕಲರಿನ ಡಿಯೋ, ಹೊಂಡಾ ಆ್ಯಕ್ಟಿವ್ ದ್ವಿಚಕ್ರ ವಾಹನ, ಒಂದು ಹಿರೋ ಕಂಪನಿಯ ಕಪ್ಪು ಬಣ್ಣದ ಹಂಕ್ ಮೊಟರ್ ಸೈಕಲ್, 600 ರೂ. ನಗದು ಹಣ, ಚಾಕು, ಎಕ್ಸ್ಟೆಂಡೆಡ್ ಕಬ್ಬಿಣದ ರಾಡ್, ಪರ್ಸ ಮತ್ತು ಆಧಾರಕಾರ್ಡ ಜಪ್ತಿ ಮಾಡಿ, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಗೋಕುಲ್ ರೋಡ್ ಪೊಲೀಸರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
Kshetra Samachara
29/06/2022 10:05 am