ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಹರಿದ ನೆತ್ತರ, ತಂಗಿಯನ್ನ ಚುಡಾಯಿಸಿದ ಕಾರಣಕ್ಕೆ ಯುವಕನೊಬ್ಬನಿಗೆ ಅಣ್ಣಂದಿರಿಂದ ಚಾಕುವಿನಿಂದ ಇರಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ.
ಚಂದ್ರಶೇಖರ್ ಎಂಬಾತನಿಗೆ ಚಾಕು ಇರಿದಿರುವ ಅಣ್ಣ-ತಮ್ಮ, ತೀವ್ರ ಗಾಯಗೊಂಡಿರುವ ಚಂದ್ರುವನ್ನು ಕಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ. ಕಿರಣ್ ಹಾಗೂ ಅಭಿ ಎನ್ನುವರು ಚಾಕು ಇರಿದಿದ್ದಾರೆ ಎಂದು ಗಾಯಾಳು ಚಂದ್ರು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/06/2022 10:33 pm