ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದ ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ : ವ್ಯಕ್ತಿಯೊರ್ವನ ಬಳಿ ಹಣ ಕಿತ್ತು ಕೊಂಡು ಎಸ್ಕೇಪ್ ಆಗಿದ್ದ ಇಬ್ಬರ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಬಂದ ಇಬ್ಬರು, ವ್ಯಕ್ತಿಯೊಬ್ಬನ ಹತ್ತಿರ ಸುಮಾರು 10,000 ರೂ. ನಗದು ಕಿತ್ತುಕೊಂಡು ಹೋದ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಡಿ. ಬಿ. ನೇತ್ರತ್ವದಲ್ಲಿನ ತಂಡ PSI ಯು.ಎಮ್. ಪಾಟೀಲ ಮತ್ತು ಸಿಬ್ಬಂದಿಗಳ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಿ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 9,500 ರೂ. ಹಣ ಕೃತ್ಯಕ್ಕೆ ಉಪಯೋಗಿಸಿದ ಒಂದು ಆಟೋವನ್ನು ವಶಪಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಆರೋಪಿ ವಿದ್ಯಾನಗರ ಮತ್ತು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆಂದು ತನಿಖಾ ವೇಳೆಯಲ್ಲಿ ತಿಳಿದು ಬಂದಿದೆ.

ರಾಬರಿ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 11,000 ರೂ. ನಗದು ಹಣ, ಒಂದು ಅಟೋ ರಿಕ್ಷಾ ಹಾಗೂ ಒಂದು ಡಿಯೋ ಸ್ಕೂಟಿ ವಶಪಡಿಸಿಕೊಂಡಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.

ಸದ್ಯ ಉಪನಗರ ಪೊಲೀಸರ ಕಾರ್ಯವೈಖರಿಗೆ ಪೊಲೀಸ್ ಆಯುಕ್ತ ಲಾಬುರಾಮ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Edited By : Shivu K
Kshetra Samachara

Kshetra Samachara

23/06/2022 09:13 am

Cinque Terre

59.07 K

Cinque Terre

9

ಸಂಬಂಧಿತ ಸುದ್ದಿ